ವಶಕ್ಕೆ ಪಡೆದ ಮೊಬೈಲ್​ ವಾರಸುದಾರರಿಗೆ ಹಸ್ತಾಂತರ

udp-24-mobile
Published on

ಉಡುಪಿ: ನಗರ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್​ ಕಳವಾದ ಬಗ್ಗೆ ದಾಖಲಾಗಿದ್ದ ದೂರುಗಳ ಆಧಾರದಲ್ಲಿ ಪತ್ತೆಹಚ್ಚಲಾದ ಮೊಬೈಲ್​ಗಳನ್ನು ಗುರುವಾರ ವಾರಸುದಾರರಿಗೆ ಹಸ್ತಾಂತರಿಸಲಾಯಿತು.

ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ ಮಾತನಾಡಿ, ಮೊಬೈಲನ್ನು ಪತ್ತೆಹಚ್ಚುವ ಅತ್ಯಾಧುನಿಕ ತಂತ್ರಜ್ಞಾನವನ್ನು ಇಲಾಖೆ ಅಭಿವೃದ್ಧಿ ಪಡಿಸಿದೆ. ಕೆ.ಎಸ್​.ಪಿ ವೆಬ್​ ಸೈಟ್​ ಗೆ ಭೇಟಿ ನೀಡಿ ಇ-ಲಾಸ್​ ಅಪ್ಲಿಕೇಶನ್​ನಲ್ಲಿ ಕಳವಾದ ಮೊಬೈಲ್​ನ ಐಎಂಇ ನಂಬರ್​ ಹಾಗೂ ಸಿಇಐಆರ್​ನಲ್ಲಿ ತಮ್ಮ ಸಂಪೂರ್ಣ ವಿವರ ದಾಖಲಿಸಬೇಕು. ಅಥವಾ ಸ್ಥಳಿಯ ಠಾಣೆಗೆ ಭೇಟಿ ನೀಡಿ, ದೂರನ್ನು ದಾಖಲಿಸಬಹುದು ಎಂದರು.

ಈ ಸಂದರ್ಭದಲ್ಲಿ ನಗರ ಠಾಣಾ ಪೋಲಿಸ್​ ನಿರೀಕ್ಷಕ ಶ್ರೀಧರ್​, ಪಿಎಸ್​ಐಗಳಾದ ಈರಣ್ಣ, ಭರತೇಶ್​, ಸಿಬ್ಬಂದಿ ಚೇತನ್​, ಬಶೀರ್​, ವಿನಯ್​, ಜಸ್ವ, ಗಂಗಾರಾಜ್​ ಉಪಸ್ಥಿತರಿದ್ದರು. ಸುಮಾರು 30 ಮಂದಿ ಠಾಣೆಯಿಂದ ಮೊಬೈಲನ್ನು ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net