ಸಮುದಾಯ ಅಭಿವೃದ್ಧಿಗೆ ಸಂಘಟನೆ ಕೊಡುಗೆ : ಮುಸ್ತಾಕ್ ಅಹಮ್ಮದ್ ಬೆಳ್ವೆ

belve
ಬೆಳ್ವೆಯಲ್ಲಿ ಅಶಕ್ತರಿಗೆ ಸಹಾಯಧನ ಹಸ್ತಾಂತರ
Published on

ವಿಜಯವಾಣಿ ಸುದ್ದಿಜಾಲ ಬೆಳ್ವೆ

ಸಮುದಾಯದ ಅಭಿವೃದ್ಧಿಗೆ ಸಂಘಟನೆಗಳು ಕೊಡುಗೆ ನೀಡುವ ಮೂಲಕ ಮಾನವೀಯ ಸ್ಪಂದನೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಟೀಮ್ ಮಲೆನಾಡು ಹ್ಯೂಮಾನಿಟೇರಿಯನ್ ಟ್ರಸ್ಟ್ ಕಾರ್ಯ ನಿರ್ವಹಿಸಲಿದೆ ಎಂದು ಟೀಮ್ ಮಲೆನಾಡು ಹ್ಯೂಮಾನಿಟೇರಿಯನ್ ಟ್ರಸ್ಟ್ ಬೆಳ್ವೆ ಅಧ್ಯಕ್ಷ ಮುಸ್ತಾಕ್ ಅಹಮ್ಮದ್ ಬೆಳ್ವೆ ಹೇಳಿದರು. ಬೆಳ್ವೆಯಲ್ಲಿ ಟೀಮ್ ಮಲೆನಾಡು ಹ್ಯೂಮಾನಿಟೇರಿಯನ್ ಟ್ರಸ್ಟ್ ಬೆಳ್ವೆ ಆಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡ ಅಶಕ್ತರಿಗೆ ಸಹಾಯಧನ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಶೇಖ್ ಅಬ್ದುಲ್ ವಾಹೀದ್ ಉಡುಪಿ, ಕುವೈಟ್ ಅಂತಾರಾಷ್ಟ್ರೀಯ ಬ್ಯಾಂಕ್ ಕಾರ್ಯನಿರ್ವಾಹಕ ವ್ಯವಸ್ಥಾಪಕ ಸರ್ಫರಾಜ್ ಸುಲೈಮಾನ್, ನಮ್ಮ ನಾಡು ಒಕ್ಕೂಟದ ಸೆಂಟ್ರಲ್ ಕಮಿಟಿ ಟ್ರಸ್ಟಿ ಫೀರು ಸಾಹೇಬ್ ಉಡುಪಿ, ಬೆಳ್ವೆ ಜುಮಾ ಮಸೀದಿ ಖತೀಬ್ ಮೌಲನ್ ಮೊಹಮ್ಮದ್ ರಫೀಕ್ ಬೆಳ್ವೆ, ಟೀಮ್ ಮಲೆನಾಡು ಟ್ರಸ್ಟ್ ಟ್ರಸ್ಟಿ ಹುಸೇನ್ ಹೈಕಾಡಿ, ನಝೀರ್ ಶಾ, ಅರಾಫತ್ ಅಲ್ಬಾಡಿ, ನಮ್ಮ ನಾಡ ಒಕ್ಕೂಟದ ಜಿಲ್ಲಾ ಯುವ ಸಂಯೋಜಕ ಅಬ್ದುಲ್ ಖಾದರ್, ಸ್ಥಳೀಯ ಪ್ರಮುಖ ಅನ್ವರ್ ಹುಸೇನ್ ಅಲ್ಬಾಡಿ ಮತ್ತಿತರರು ಉಪಸ್ಥಿತರಿದ್ದರು.

ಮೊಹಮ್ಮದ್ ಆಸೀಫ್ ಸ್ವಾಗತಿಸಿ, ಮೊಹಮ್ಮದ್ ರಫೀಕ್ ಬೆಳ್ವೆ ಕಿರಾತ್ ಪಠಿಸಿದರು. ಹುಸೇನ್ ಹೈಕಾಡಿ ಪ್ರಸ್ತಾವಿಸಿದರು. ಅಬ್ದುಲ್ ಶುಕೂರ್ ಕಾರ್ಯಕ್ರಮ ನಿರೂಪಿಸಿದರು. ಬಸ್ರೂರು ಸರ್ಕಾರಿ ಉರ್ದು ಶಾಲೆ, ಅಪಘಾತ ಗಾಯಾಳು ಗಂಗೊಳ್ಳಿ ನಿವಾಸಿ ನಿಸಾರ್ ಅಹಮ್ಮದ್, ಸಗೀರ್ ಹೈಕಾಡಿ, ಬೆಳ್ವೆ ಗೋಪಾಲ ಮಡಿವಾಳ ಹಾಗೂ ನಜ್ಮಾ ಬಾನು ಗೋಳಿಯಂಗಡಿ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯಧನ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net