

ಬಂಟ್ವಾಳ: ಇಲ್ಲಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ನ ವಗ್ಗ ವಲಯದ ಮಧ್ವ ಕಾರ್ಯ ಕ್ಷೇತ್ರದ ದೀಪಾಶ್ರೀ ಸಂಘದ ಸದಸ್ಯೆ ಖತೀಜಮ್ಮ ಅವರ ಮನೆಗೆ ವಿದ್ಯುತ್ ಆಘಾತದಿಂದ ಹಾನಿಯಾಗಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಜೂರಾದ ಪರಿಹಾರ ಸಹಾಯಧನದ ಚೆಕ್ ಹಸ್ತಾಂತರ ಮಾಡಲಾಯಿತು.
ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ, ವಲಯ ಮೇಲ್ವಿಚಾರಕಿ ಸವಿತಾ, ಮಧ್ವ ಒಕ್ಕೂಟದ ಅಧ್ಯಕ್ಷೆ ಪವಿತ್ರಾ, ಸೇವಾ ಪ್ರತಿನಿಧಿ ಸುಮಿತ್ರ, ಶೌರ್ಯ ವಿಪತ್ತು ನಿರ್ವಹಣಾ ಘಟಕ ಮಾಸ್ಟರ್ ಪ್ರಕಾಶ್ ಉಪಸ್ಥಿತರಿದ್ದರು.