ವಾರಸುದಾರರಿಗೆ ಕಳ್ಳತನ ವಸ್ತುಗಳ ಹಸ್ತಾಂತರ

19-01-Shiva-4
ರಾಯಚೂರಿನ ಪೊಲೀಸ್ ಮೈದಾನದಲ್ಲಿ ಕಳ್ಳತನ ಪ್ರಕರಣಗಳಲ್ಲಿ ವಶ ಪಡಿಸಿಕೊಂಡ ಚಿನ್ನಾಭರಣಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಬಿ.ನಿಖಿಲ್ ವಾರಸುದಾರರಿಗೆ ಶುಕ್ರವಾರ ವಿತರಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಕಾರಿ ಆರ್.ಶಿವಕುಮಾರ ಇದ್ದರು.
Published on

ರಾಯಚೂರು: ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿ ವಶಪಡಿಸಿಕೊಳ್ಳಲಾಗಿದ್ದ 1.79 ಲಕ್ಷ ರೂ. ವೌಲ್ಯದ ಸಾಮಗ್ರಿಗಳು ಸ್ಥಳೀಯ ಜಿಲ್ಲಾ ಪೊಲೀಸ್ ಮೈದಾನದಲ್ಲಿ ಶುಕ್ರವಾರ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಸಾಮಗ್ರಿಗಳನ್ನು ವಾರಸುದಾರರಿಗೆ ಹಸ್ತಾಂತರಿಸಿ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಬಿ.ನಿಖಿಲ್ ಮಾತನಾಡಿ, 2023ರ ಜ.1 ರಿಂದ ಡಿ.31ರವರೆಗೆ ಜರುಗಿದ 113 ಪ್ರಕರಣಗಳಲ್ಲಿ 164 ಜನರನ್ನು ಬಂಸಿ 1.79 ಕೋಟಿ ರೂ. ವೌಲ್ಯದ ಚಿನ್ನಾಭರಣ, ವಾಹನ ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಗುತ್ತಿದೆ.
ಮೊಬೈಲ್ ಕಳ್ಳತನ ಪ್ರಕರಣಗಳಿಗೆ ಸಿಇಐಆರ್ ಪೋರ್ಟ್‌ಲ್‌ನಲ್ಲಿ ನೋಂದಾಯಿಸಿದ ಒಟ್ಟು 772 ಮೊಬೈಲ್‌ಗಳನ್ನು ಪತ್ತೆ ಮಾಡಿ ಸಾರ್ವಜನಿಕರಿಗೆ ಹಿಂದುರುಗಿಸಲಾಗಿದೆ. ಜಿಲ್ಲೆಯಾದ್ಯಂತ ಮಹಿಳೆ ಮತ್ತು ಮಕ್ಕಳು ಕಾಣೆ 242 ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 223 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ.
ಗಾಂಜಾ ಬೆಳೆಯುವ, ಅಕ್ರಮ ಸಾಗಣೆ ಮಾಡುವ ಅಡ್ಡೆಗಳ ಮೇಲೆ ದಾಳಿ ಮಾಡಿ 14 ಪ್ರಕರಣಗಳನ್ನು ದಾಖಲಿಸಿ, 38 ಕೆಜಿ ಗಾಂಜಾ ಜಫ್ತಿ ಮಾಡಿ 21 ಜನರನ್ನು ಬಂಸಲಾಗಿದೆ. ಚಾಕಲೇಟ್‌ನಲ್ಲಿ ಗಾಂಜಾ ಮಿಶ್ರಣ ಮಾಡಿ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿ 8.99 ಕೆಜಿ ಚಾಕಲೇಟ್ ವಶಪಡಿಸಿಕೊಳ್ಳಲಾಗಿದೆ.
ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ವಿಶೇಷ ಕಾರ್ಯಾಚರಣೆ ಮಾಡಿ ದೋಷಪೂರಿತ ಕರ್ಕಶ ಶಬ್ದ ಉಂಟು ಮಾಡುವ ಸೈಲೆನ್ಸರ್ ಅಳವಡಿಸಿಕೊಂಡು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ 380 ದ್ವಿಚಕ್ರ ವಾಹನ ಸವಾರರನ್ನು ಪತ್ತೆ ಹಚ್ಚಿ 2.52 ಲಕ್ಷ ರೂ. ದಂಡ ವಿಸಿ ಸೈಲೆನ್ಸರ್‌ಗಳನ್ನು ನಾಶ ಪಡಿಸಲಾಗಿದೆ.
2022ನೇ ಸಾಲಿನಲ್ಲಿ 306 ರಸ್ತೆ ಅಪಘಾತ ಪ್ರಕರಣಗಳು ದಾಖಲಾಗಿದ್ದು, 2023ನೇ ಸಾಲಿನಲ್ಲಿ 267 ರಸ್ತೆ ಅಪಘಾತ ಪ್ರಕರಣಗಳು ದಾಖಲಾಗಿದೆ. ವೈದ್ಯರ ಮೇಲೆ ಗುಂಡು ಹಾರಿಸಿದ್ದ ಆರೋಪಿಯನ್ನು 24 ಗಂಟೆ ಒಳಗೆ ಬಂಸಲಾಗಿದೆ ಎಂದು ಬಿ.ನಿಖಿಲ್ ತಿಳಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಕಾರಿಗಳಾದ ಆರ್.ಶಿವಕುಮಾರ, ಹರೀಶ್, ಡಿವೈಎಸ್ಪಿ ಸತ್ಯನಾರಾಯಣರಾವ್ ಹಾಗೂ ಸಿಪಿಐ, ಪಿಎಸ್‌ಐಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net