ಸಮಾಜೋದ್ಧಾರದಲ್ಲಿ ಬ್ಯಾಂಕ್​ಗಳ ಕೊಡುಗೆ ಅಪಾರ...

Karnataka Bank
Published on

ಪೇಜಾವರ ವಿಶ್ವಪ್ರಸನ್ನ ಶ್ರೀ ಮೆಚ್ಚುಗೆ

ಶಾಲಾ ವಾಹನ ಹಸ್ತಾಂತರ

ವಿಜಯವಾಣಿ ಸುದ್ದಿಜಾಲ ಉಡುಪಿ

ಶತಮಾನ ಕಂಡ ಕರ್ಣಾಟಕ ಬ್ಯಾಂಕ್​ ಪ್ರತಿವರ್ಷ ತಾನು ಬೆಳೆದದ್ದಲ್ಲದೆ ಕಾರ್ಪೋರೇಟ್​ ಸಾಮಾಜಿಕ ಜವಾಬ್ದಾರಿಯ ಮೂಲಕ ಸಮಾಜದ ಬೆಳೆವಣಿಗೆಗೂ ಸಹ ಅತ್ಯಮೂಲ್ಯ ಕೊಡುಗೆ ನೀಡುತ್ತ ಬಂದಿದೆ. ಇದು ಅನುಕರಣೀಯ ಕಾರ್ಯ. ಸಮಾಜದ ಅಭಿವೃದ್ಧಿಯಲ್ಲಿ ಹಣಕಾಸು ಸಂಸ್ಥೆಗಳ ಪಾತ್ರವೂ ಪ್ರಮುಖವಾಗಿದೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.

ಕರ್ಣಾಟಕ ಬ್ಯಾಂಕ್​ನ ಉಡುಪಿ ಪ್ರಾದೇಶಿಕ ಕಚೇರಿಯಲ್ಲಿ ಮಾ.4ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬ್ಯಾಂಕ್​ನ ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿಯ ಚಟುವಟಿಕೆಯಡಿ ಉಡುಪಿಯ ಕೈಪುಂಜಾಲು, ಕಾಪು, ವಿಶ್ವೇಶ ತೀರ್ಥ ವಿದ್ಯಾಲಯಕ್ಕೆ ಶಾಲಾ ಬಸ್​ ಹಸ್ತಾಂತರಿಸಿ ಆಶೀರ್ವಚನ ನೀಡಿದರು.

ಕರ್ಣಾಟಕ ಬ್ಯಾಂಕ್​ನ ಜಿಎಂ ವಿನಯ್​ ಭಟ್​, ಪ್ರಾದೇಶಿಕ ಕಚೇರಿಯ ಮುಖ್ಯಸ್ಥ (ಎಜಿಎಂ) ವಾದಿರಾಜ್​ ಭಟ್​ ಕೆ., ಡೆಪ್ಯುಟಿ ರೀಜನಲ್​ ಹೆಡ್​ ಮನೋಜ್​ ಕೋಟ್ಯಾನ್​, ಚೀಫ್​ ಮೆನೇಜರ್​ ಪ್ರದೀಪಕುಮಾರ್​, ಶಾಲಾ ಸಮಿತಿಯ ಅಧ್ಯಕ್ಷ ಸತೀಶಕುಮಾರ್​, ಬೆಂಗಳೂರಿನ ಮೆಸರ್ಸ್​ ಎಸ್​ ಡಿಸೈನರ್ಸ್​ ಲಿಮಿಟೆಡ್​ನ ಮಾಲೀಕ ಪಿ.ರಾಮದಾಸ್​ ಮಾದಮಣ್ಣಾಯ, ಬ್ಯಾಂಕ್​ನ ಸ್ಥಳೀಯ ಶಾಖಾ ಪ್ರಬಂಧಕರು ಹಾಗೂ ಪ್ರಾದೇಶಿಕ ಕಚೇರಿಯ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net