ನವೀಕೃತ ಹಿಂದು ರುದ್ರಭೂಮಿ ಹಸ್ತಾಂತರ

kota (4)
Published on

ಕೋಟ: ಪಾಂಡೇಶ್ವರ ಗ್ರಾಪಂ ವ್ಯಾಪ್ತಿಯ ಮೂಡಹಡು ಹಿಂದು ರುದ್ರಭೂಮಿಯ ಮೇಲ್ಛಾವಣಿ ಶಿಥಿಲಗೊಂಡಿತ್ತು. ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್ 70 ಸಾವಿರ ರೂ.ವೆಚ್ಚದಲ್ಲಿ ಮೇಲ್ಛಾವಣಿ ದುರಸ್ತಿಯೊಂದಿಗೆ ರುದ್ರಭೂಮಿಯನ್ನು ನವೀಕರಣಗೊಳಿಸಿ ಹಿಂದು ರುದ್ರಭೂಮಿ ಟ್ರಸ್ಟಿಗೆ ಇತ್ತೀಚೆಗೆ ಹಸ್ತಾಂತರಿಸಿದರು.

ಟ್ರಸ್ಟ್ ಅಧ್ಯಕ್ಷ ನಾರಾಯಣ ಆಚಾರ್, ಸದಸ್ಯರಾದ ಪ್ರತಾಪ್ ಶೆಟ್ಟಿ, ಶಂಕರ್ ಕುಲಾಲ್, ಪಾಂಡೇಶ್ವರ ಪಂಚಾಯಿತಿ ಅಧ್ಯಕ್ಷೆ ಸುಶೀಲಾ ಪೂಜಾರಿ, ಉಪಾಧ್ಯಕ್ಷ ವೈ.ಬಿ.ರಾವೇಂದ್ರ, ಚಂದ್ರಮೋಹನ್ ಪೂಜಾರಿ, ರವೀಶ್ ಶ್ರೀಯಾನ್, ಸುಜಾತ ವೆಂಕಟೇಶ್, ರೋಟರಿ ಕ್ಲಬ್ ಅಧ್ಯಕ್ಷೆ ಲೀಲಾವತಿ ಗಂಗಾಧರ, ಕಾರ್ಯದರ್ಶಿ ಸುಲತಾ ಹೆಗ್ಡೆ, ಉಪಾಧ್ಯಕ್ಷೆ ರತ್ನಾ ಜೆ.ರಾಜ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net