ಕಯ್ಯರ್‌ನಲ್ಲಿ ನೂತನ ಮನೆಗಳ ಹಸ್ತಾಂತರ : ಕ್ರಿಸ್ತರಾಜ ದೇವಾಲಯದ ಕಟ್ಟಡದ ನಿರ್ಮಾಣ ಹಿನ್ನೆಲೆ

mane
ಕಯ್ಯರ್ ಇಗರ್ಜಿ ವತಿಯಿಂದ ನೂತನ ಮನೆಗಳನ್ನು ಹಸ್ತಾಂತರಿಸಲಾಯಿತು.ಸ್ಟ್ಯಾನಿ ಪಿರೇರಾ, ಮ್ಯಾಕ್ಸಿಂ ರೊಜಾರಿಯೊ ಮೊದಲಾದವರಿದ್ದರು.
Published on

ಕುಂಬಳೆ: ಕಯ್ಯರ್ ಕ್ರಿಸ್ತರಾಜ ದೇವಾಲಯದ ನೂತನ ಕಟ್ಟಡದ ನಿರ್ಮಾಣದಂಗವಾಗಿ ಬಡ ಕುಟುಂಬಗಳಿಗೆ ನಿರ್ಮಿಸಿದ ಎರಡು ಮನೆಗಳ ಹಸ್ತಾಂತರ ಹಾಗೂ ಮೂರನೇ ಮನೆಗೆ ಶಿಲಾನ್ಯಾಸ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಚೇವಾರ್ ಸಮೀಪ ಈ ಮನೆಗಳನ್ನು ನಿರ್ಮಿಸಲಾಗಿತ್ತು. ಬೇಳ ಶೋಕಮಾತಾ ಪುಣ್ಯಕ್ಷೇತ್ರದ ಧರ್ಮಗುರು ಸ್ಟಾೃನಿ ಪಿರೇರಾ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಧರ್ಮಪ್ರಾಂತ್ಯದ ಎಸ್ಟೇಟ್ ಮ್ಯಾನೇಜರ್ ಮ್ಯಾಕ್ಸಿಂ ರೊಜಾರಿಯೊ ಆಶೀರ್ವಚನ ನೀಡಿದರು.

ಕಯ್ಯರ್ ಕ್ರಿಸ್ತರಾಜ ದೇವಾಲಯದ ಧರ್ಮಗುರು ವಿಶಾಲ್ ಮೋನಿಸ್, ಪಾಲನಾ ಸಮಿತಿ ಉಪಾಧ್ಯಕ್ಷ ರೋಶನ್ ಡಿಸೋಜ, ಕಾರ್ಯದರ್ಶಿ ಜೀನಾ ಡಿಸೋಜ, ಸ್ಥಳ ದಾನಿ ಲಿಗೋರಿ ಡಿಸೋಜ, ಬ್ರಿಜಿತ್ ಡಿಸೋಜ, ಮರಿಯೆಚೆ ಲೀಜನ್ ಸಂಘಟನೆಯ ಅಧ್ಯಕ್ಷೆ ಭವ್ಯಾ ಮೊಂತೆರೋ, ಜೋಸೆಫ್ ಸುವಾರಿಸ್, ಸುನಿತಾ ಡಿಸೋಜ, ಜಾಸ್ಮಿನ್ ಲೂವಿಸ್ ಮೊದಲಾದವರು ಉಪಸ್ಥಿತರಿದ್ದರು.

ಮೂರನೇ ಮನೆಗೆ ಸ್ಟ್ಯಾನಿ ಪಿರೇರಾ ಶಿಲಾನ್ಯಾಸ ನೆರವೇರಿಸಿದರು. ಮನೆಗಳ ನಿರ್ಮಾಣಕ್ಕೆ ಸ್ಥಳ ದಾನ ನೀಡಿದ ಲಿಗೋರಿ-ಬ್ರಿಜಿತ್ ಡಿಸೋಜ ದಂಪತಿಯನ್ನು ಈ ಸಂದರ್ಭ ಸನ್ಮಾನಿಸಲಾಯಿತು. ರೀನಾ ಸೆರಾವೊ ಪರಿಚಯ ನೀಡಿದರು. ಮನೆಗೆ ದಾನ ಹಾಗೂ ಸಹಕಾರ, ಸೇವೆ ಸಲ್ಲಿಸಿದವರನ್ನು ಗೌರವಿಸಲಾಯಿತು. ಸಂತೋಷ್ ಕ್ರಾಸ್ತಾ ಹಾಗೂ ಪೀಟರ್ ಡಿಸೋಜ ಅವರಿಗೆ ಮನೆ ಹಸ್ತಾಂತರಿಸಲಾಯಿತು.

ಇಂಜಿನಿಯರ್ ರಾಧಾಕೃಷ್ಣ ಮುಳಿಯ ಅವರನ್ನು ಸನ್ಮಾನಿಸಲಾಯಿತು. ವಿಶಾಲ್ ಮೋನಿಸ್ ಸ್ವಾಗತಿಸಿದರು. ರೋಶನ್ ಡಿಸೋಜ ವಂದಿಸಿದರು. ಆನ್ಸನ್ ಮತ್ತು ರೀಷಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net