ಕುಲಾಲ ಸಂಘದಿಂದ ಸಹಾಯ ಹಸ್ತಾಂತರ

Bdk_Kulala
Published on

ಮಂಜೇಶ್ವರ: ಕಾಸರಗೋಡು ಜಿಲ್ಲಾ ಕುಲಾಲ ಸಂ ಮಂಜೇಶ್ವರ ಘಟಕದ ಆಶ್ರಯದಲ್ಲಿ ‘ಕುಲಾಲ ಸವಾಜದ ನೊಂದ ಜೀವಕ್ಕೊಂದು ಆಸರೆ’ ಸಹಾಯಹಸ್ತ ಯೋಜನೆಯಡಿ 30 ಸಾವಿರ ರೂ. ಮೊತ್ತವನ್ನು ಹಾವು ಕಚ್ಚಿ ಮೃತಪಟ್ಟ ಮೀಂಜ ಪಂಚಾಯಿತಿ ಕುಲಾಲ ಶಾಖೆಗೊಳಪಟ್ಟ ಪಳ್ಳತಡ್ಕ ನಿವಾಸಿ ದಿ.ಅಶೋಕ್ ಪ್ರಮೀಳಾ ಕುಟುಂಬಕ್ಕೆ ಇತ್ತೀಚೆಗೆ ಹಸ್ತಾಂತರಿಸಲಾಯಿತು.

ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ವಕೀಲ ರವೀಂದ್ರ ಮುನ್ನಿಪ್ಪಾಡಿ, ಜಿಲ್ಲಾ ಸಂದ ಪ್ರಧಾನ ಕಾರ್ಯದರ್ಶಿ ದಾಮೋದರ ವಾಸ್ತರ್ ಕಬ್ಬಿನಹಿತ್ಲು, ಜಿಲ್ಲಾ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಸುಧೀರ್ ರಂಜನ್ ಕೆ.ದೈಗೋಳಿ, ಮೀಂಜ ಗ್ರಾಮ ಪಂಚಾಯಿತಿ ವಾಜಿ ಸದಸ್ಯೆ ಹೇಮಲತಾ, ವರ್ಕಾಡಿ ಪಂಚಾಯಿತಿ ಕುಲಾಲ ಶಾಖೆಯ ಅಧ್ಯಕ್ಷ ಕೇಶವ ಕೊಡ್ಲಮೊಗರು, ಸುಧಾಕರ ಮೊರತ್ತಣೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net