ಕಿಳಿಂಗಾರು ಮನೆತನದಿಂದ ಆರ್ಥಿಕ ನೆರವು

neravu
ಸಾಯಿರಾಂ ಕೆ.ಎನ್.ಕೃಷ್ಣ ಭಟ್ ಗಣ್ಯರ ಸಮಕ್ಷಮದಲ್ಲಿ ನೆರವು ಹಸ್ತಾಂತರಿಸಿದರು. ಕಿಳಿಂಗಾರು ನಡುಮನೆ ಗೋಪಾಲಕೃಷ್ಣ ಭಟ್, ಮಹಾಲಿಂಗೇಶ್ವರ ಭಟ್ ಮಣಿಮುಂಡ, ವಿಷ್ಣು ಭಟ್ ಮಂಗಳೂರು ಮೊದಲಾದವರಿದ್ದರು.
Published on

ಬದಿಯಡ್ಕ: ದಿ.ಕಿಳಿಂಗಾರು ಸಾಯಿರಾಂ ಗೋಪಾಲಕೃಷ್ಣ ಭಟ್ ಕುಟುಂಬದಿಂದ ಅಶಕ್ತರಿಗೆ ನೆರವು, ವಿದ್ಯಾಭ್ಯಾಸಕ್ಕೆ ಧನಸಹಾಯ ಸಹಿತ ನೆರವಿನ ಕಾರ್ಯಕ್ರಮ ಭಾನುವಾರ ಅವರ ನಿವಾಸದಲ್ಲಿ ನಡೆಯಿತು.

ಸಾಯಿರಾಂ ಗೋಪಾಲಕೃಷ್ಣ ಭಟ್‌ರ ಪುತ್ರ ಸಾಯಿರಾಂ ಕೃಷ್ಣ ಭಟ್ ಯೋಗೀಶ್ ಆಚಾರ್ಯ ವರ್ಕಾಡಿ ಅವರ ಚಿಕಿತ್ಸೆಗೆ, ಲೀಲಾ ಬಾಡೂರುಪದವು ಹಾಗೂ ಆಯಿಶತ್ ಮಜಿದಾ ಮಜಿರ್ಪಳ್ಳಕಟ್ಟೆ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಧನ ಸಹಾಯ ನೀಡಿದರು. ಜತೆಗೆ ಸವಿತಾ ಕಿದೂರು ಎಂಬುವರಿಗೂ ನೆರವು ನೀಡಲಾಯಿತು.

ಕಿಳಿಂಗಾರು ನಡುಮನೆ ಗೋಪಾಲಕೃಷ್ಣ ಭಟ್, ಮಹಾಲಿಂಗೇಶ್ವರ ಭಟ್ ಮಣಿಮುಂಡ, ವಿಷ್ಣು ಭಟ್ ಮಂಗಳೂರು, ಶಾರದಾ ಸಾಯಿರಾಂ ಭಟ್, ನಿವೃತ್ತ ಅಧ್ಯಾಪಕ ಈಶ್ವರ ಭಟ್ ಕಾನ, ವೇಣುಗೋಪಾಲ ಕಿಳಿಂಗಾರು, ಸಂದೇಶ ವಾರಣಾಸಿ, ಶಿವಕುಮಾರ, ಸಂಜೀವ ರೈ ಮಾವಿನಕಟ್ಟೆ ಉಪಸ್ಥಿತರಿದ್ದರು.

ಸಂಪಾದನೆಯ ಒಂದಿಷ್ಟು ಭಾಗವನ್ನು ಉತ್ತಮ ಕಾರ್ಯಗಳಿಗೆ ಉಪಯೋಗಿಸಿದಾಗ ಅದು ಇತರರಿಗೆ ಸಹಾಯಕವಾಗುತ್ತದೆ. ತುಂಬಾ ಕಷ್ಟದಲ್ಲಿರುವವರಿಗೆ ನೆರವಾಗುವುದರಿಂದ ನೆಮ್ಮದಿ ಲಭಿಸುತ್ತದೆ.- ಸಾಯಿರಾಂ ಕೆ.ಎನ್.ಕೃಷ್ಣ ಭಟ್ https://www.vijayavani.net/dr-ningayya-farewell https://www.vijayavani.net/review-of-railway-works-by-divisional-manager

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net