ಸಮುದಾಯ ಭವನ ಹಸ್ತಾಂತರ

Untitled design (9)
ಸಂಡೂರು ತಾಲೂಕು ರಾಜಾಪುರ ಗ್ರಾಮದಲ್ಲಿ ಗ್ರಾಪಂಗೆ ಸಮುದಾಯ ಭವನ ಹಸ್ತಾಂತರಿಸಲಾಯಿತು. ಜೆಎಸ್‌ಡಬ್ಲುೃ ಎನರ್ಜಿ ಲಿ.ಮುಖ್ಯಸ್ಥ ಕಾರ್ತಿಕೇಯ ಮಿಶ್ರ, ಗ್ರಾಪಂ ಅಧ್ಯಕ್ಷ ನಾಗೇಶ್ ಬನ್ನಿಹಟ್ಟಿ, ಉಪಾಧ್ಯಕ್ಷ ವಿ.ಗಂಗಣ್ಣ ಇದ್ದರು.
Published on

ಸಂಡೂರು: ತಾಲೂಕಿನ ರಾಜಾಪುರ ಗ್ರಾಮದಲ್ಲಿ ಜೆಎಸ್‌ಡಬ್ಲುೃ ಎನರ್ಜಿ ಮತ್ತು ಫೌಂಡೇಷನ್‌ನಿಂದ ಸಿಎಸ್‌ಆರ್ ಅಡಿ ನಿರ್ಮಿಸಿದ ಸಮುದಾಯ ಭವನವನ್ನು ಮಂಗಳವಾರ ಗ್ರಾಪಂಗೆ ಹಸ್ತಾಂತರಿಸಲಾಯಿತು.


ಜೆಎಸ್‌ಡಬ್ಲುೃ ಎನರ್ಜಿ ಎನರ್ಜಿ ಲಿ. ವಿಜಯನಗರ ಮುಖ್ಯಸ್ಥ ಕಾರ್ತಿಕೇಯ ಮಿಶ್ರ ಮಾತನಾಡಿ, ಸಂಸ್ಥೆಯಿಂದ ಗ್ರಾಮದ ಪ್ರೌಢಶಾಲೆಗೆ ಗಣಿತ-ವಿಜ್ಞಾನ ಪ್ರಯೋಗಾಲಯ, ಒಳಚರಂಡಿ ವ್ಯವಸ್ಥೆ ಮಾಡಲಾಗಿದೆ.

ಇದೀಗ ಸಮುದಾಯ ಭವನ ನಿರ್ಮಿಸಿದ್ದು, ಫೌಂಡೇಷನ್ ಸಹಯೋಗದಲ್ಲಿ ಅಗತ್ಯ ಸೌಕರ್ಯ ಒದಗಿಸಲಾಗುವುದು ಎಂದು ತಿಳಿಸಿದರು. ಜೆಎಸ್‌ಡಬ್ಲುೃ ಅಧಿಕಾರಿಗಳಾದ ಸುದರ್ಶನ್ ಮಡ್ಡಿ, ಪರ್ವೀನ್ ಕಟೋಚ್, ಮನೋಜ್ ಮುನ್ಷಿ, ರಾಜಕುಮಾರ್ ವರ್ಮಾ, ರಾಘವೇಂದ್ರ ಕೊಪ್ಪದ, ಶ್ರೀಕಾಂತ್ ಹೆಗಡೆ, ಗ್ರಾಪಂ ಅಧ್ಯಕ್ಷ ನಾಗೇಶ್ ಬನ್ನಿಹಟ್ಟಿ, ಉಪಾಧ್ಯಕ್ಷ ವಿ.ಗಂಗಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net