ಮೂರ್ತೆದಾರರ ಸಂಘದಿಂದ ಚೆಕ್ ಹಸ್ತಾಂತರ

cheq
Published on

ಕೋಟ: ಕೋಟತಟ್ಟು ಗ್ರಾಮ ಪಂಚಾಯಿತಿ ವತಿಯಿಂದ ದಾನಿಗಳ ಸಹಕಾರದಲ್ಲಿ ಚಿಟ್ಟಿಬೆಟ್ಟು ಕೊರಗ ಕಾಲನಿಯಲ್ಲಿ ವಾಸ್ತವ್ಯವಿರುವ ಎಂಟು ಕುಟುಂಬಗಳಿಗೆ 80 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಮನೆ ನಿರ್ಮಾಣಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ವತಿಯಿಂದ ಪಂಚಾಯಿತಿಗೆ 25 ಸಾವಿರ ರೂ. ಮೊತ್ತದ ಚೆಕ್ ಹಸ್ತಾಂತರಿಸಲಾಯಿತು.

ಪಂಚಾಯಿತಿ ಅಧ್ಯಕ್ಷ ಕೆ.ಸತೀಶ್ ಕುಂದರ್ ಬಾರಿಕೆರೆ, ಉಪಾಧ್ಯಕ್ಷೆ ಸರಸ್ವತಿ, ಸದಸ್ಯರಾದ ವಾಸು ಪೂಜಾರಿ, ಪ್ರಕಾಶ್ ಹಂದಟ್ಟು, ರವೀಂದ್ರ ತಿಂಗಳಾಯ, ವಿದ್ಯಾ, ಪಿಡಿಒ ರವೀಂದ್ರ ರಾವ್, ಮೂರ್ತೆದಾರರ ಸಹಕಾರಿ ಸಂಘದ ಅಧ್ಯಕ್ಷ ಕೆ.ಕೊರಗ ಪೂಜಾರಿ, ಉಪಾಧ್ಯಕ್ಷ ಜಯರಾಮ ಪೂಜಾರಿ , ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕೆಮ್ಮಣ್ಣು, ನಿರ್ದೇಶಕರಾದ ರಾಜು ಪೂಜಾರಿ, ಜಿ.ಸಂಜೀವ ಪೂಜಾರಿ, ಪಿ.ಕೃಷ್ಣ ಪೂಜಾರಿ, ರಾಮ ಪೂಜಾರಿ, ಮಂಜುನಾಥ ಪೂಜಾರಿ, ಭಾರತಿ ಎಸ್.ಪೂಜಾರಿ, ಪ್ರಭಾವತಿ ಡಿ.ಬಿಲ್ಲವ ಹಾಗೂ ಕೊರಗ ಸಮುದಾಯದ ಕುಟುಂಬಸ್ಥರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net