ಫಾರ್ಚುನರ್​ ವಾಹನದ ಚಾಸಿಸ್​ ಕಟ್​ ಸೆಕ್ಷನ್​ ಮಾದರಿ ಹಸ್ತಾಂತರ

Handover of chassis cut section model of Fortuner vehicle
Handover of chassis cut section model of Fortuner vehicle
Published on

ವಿಜಯಪುರ: ನಗರದ ಪ್ರತಿಷ್ಠಿತ ಬಿಎಲ್​ಡಿಇ ಸಂಸ್ಥೆಯ ಫ.ಗು. ಹಳಕಟ್ಟಿ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್​ ಇಂಜಿನಿಯರಿಂಗ್​ ವಿಭಾಗಕ್ಕೆ ಬೆಂಗಳೂರಿನ ಬಿಡದಿಯ ಟೊಯೋಟಾ ಕಿಲೋರ್ಸ್ಕರ್​ ಮೋರ್ಟಸ್​ ಕಂಪನಿ ತಯಾರಿಸಿದ ಬಿಎಸ್​ 6 ಎಂಜಿನ್​ ಮತ್ತು ಇನ್ನಿತರ ಪ್ರಚಲಿತ ಉನ್ನತ ತಂತ್ರಾನ ಹೊಂದಿರುವ ಫಾರ್ಚುನರ್​ ವಾಹನದ ಚಾಸಿಸ್​ನ ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವ ಕಟ್​ ಸೆನ್​ ಮಾದರಿ ಪ್ರಾತ್ಯಕೆಯನ್ನು ಗುರುವಾರ ಹಸ್ತಾಂತರಿಸಲಾಯಿತು.

ಸಂಸ್ಥೆ ಅಧ್ಯರೂ ಆದ ಸಚಿವ ಎಂ.ಬಿ. ಪಾಟೀಲ ಅವರ ಆಶಯದಂತೆ ಆಗಿರುವ ತಿಳಿವಳಿಕೆ ಒಪ್ಪಂದ(ಎಂಒಯು)ದ ಭಾಗವಾಗಿ ಮಹಾವಿದ್ಯಾಯದ ಮೆಕ್ಯಾನಿಕಲ್​ ವಿಭಾಗದ ಆಯ್ದ ಬೋಧಕ ಮತ್ತು ತಾಂತ್ರಿಕ ಸಿಬ್ಬಂದಿಗೆ ತರಬೇತಿ ನೀಡುವ ಮೂಲಕ ಪ್ರಾತ್ಯಕೆಗಳನ್ನು ನೀಡಿದರು.

ಮೆಕ್ಯಾನಿಕಲ್​ ವಿಭಾಗದ ಬಾಷ್​ ಪ್ರಯೋಗಾಯದಲ್ಲಿ ಪ್ರಾಚಾರ್ಯ ಡಾ. ವಿ.ಜಿ. ಸಂಗಮ ಪ್ರಾತ್ಯಕ್ಷಿಕೆಗಳನ್ನು ಅನಾವರಣಗೊಳಿಸಿ ಮಾತನಾಡಿ, ಟೊಯೋಟಾ ಕಂಪನಿಯವರು ಒದಗಿಸಿದ ಈ ಸೌಲಭ್ಯವನ್ನು ಎಲ್ಲ ತಾಂತ್ರಿಕ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪಡೆದುಕೊಂಡು ಭವಿಷ್ಯದಲ್ಲಿ ಆಟೋಮೊಬೈಲ್​ ಉದ್ಯಮ ಹಾಗೂ ರಸ್ತೆ ಸಾರಿಗೆ ತಂತ್ರಾನದಲ್ಲಿ ಆಗುತ್ತಿರುವ ಅಭಿವೃದ್ಧಿಯ ಪ್ರಯೋಜನ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಮೆಕ್ಯಾನಿಕಲ್​ ಇಂಜಿನಿಯರಿಂಗ್​ ವಿಭಾಗವು ವಿದ್ಯಾರ್ಥಿಗಳಿಗೆ ಆಟೋಮೊಬೈಲ್​ ಮತ್ತು 3ಡಿ ಮುದ್ರಣ ತಂತ್ರಾನಗಳಲ್ಲಿ ತರಬೇತಿ ನೀಡಲು ಶ್ರೇಷ್ಠತಾ ಕೇಂದ್ರ ಸ್ಥಾಪಿಸಿದೆ. ಈ ಸೌಲಭ್ಯವು ವಿದ್ಯಾರ್ಥಿಗಳಿಗೆ ಅತ್ಯುತ್ತಮ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ.

ಉಪ ಪ್ರಾಚಾರ್ಯ ಡಾ. ಪಿ.ವಿ. ಮಾಳಜಿ, ಡಾ. ಲೀನಾ ರಾಘಾ, ಮೆಕ್ಯಾನಿಕಲ್​ ವಿಭಾಗದ ಮುಖ್ಯಸ್ಥ ಡಾ. ಆರ್​.ಎನ್​. ಜೀರಗಾಳ ಮತ್ತಿತರರಿದ್ದರು.

ಸದರಿ ಪ್ರಾತ್ಯಕೆ ಕುರಿತು ಹೆಚ್ಚಿನ ಮಾಹಿತಿಗೆ ಡಾ. ಸಿ.ಆರ್​. ಹಿರೇಮಠ ಮೊ. 8310180013 ಮತ್ತು ಪ್ರೊ. ಪಿ.ಎಲ್​. ಪುಠಾಣಿ ಮೊ. 9739062927ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net