

ಬೆಳ್ತಂಗಡಿ: ಅಟ್ಲಾಜೆ ಕ್ರಿಕೆಟರ್ಸ್ ವತಿಯಿಂದ ಕ್ರಿಕೆಟ್ ಪಂದ್ಯಾಟ ಆಯೋಜಿಸಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಬಳಂಜ ಶಾಲಾ ಶಿಕ್ಷಣ ಟ್ರಸ್ಟ್‌ಗೆ 31 ಸಾವಿರ ರೂ. ನೆರವು ಹಸ್ತಾಂತರ ಮಾಡಲಾಯಿತು. ಬಳಂಜ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಮನೋಹರ್ ಬಳಂಜ, ಟ್ರಸ್ಟ್ ಸದಸ್ಯರು ಮೊತ್ತ ಸ್ವೀಕರಿಸಿದರು.
ಒಂದು ವಾರದ ಹಿಂದೆ ಲತೇಶ್ ಪೆರಾಜೆ, ಪ್ರಣಾಮ್ ಶೆಟ್ಟಿ ನೇತೃತ್ವದಲ್ಲಿ ಅಟ್ಲಾಜೆ ಕ್ರಿಕೆಟರ್ಸ್ ವತಿಯಿಂದ ನಿಶಾಂತ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ 61 ಸಾವಿರ ರೂ. ಉಳಿಕೆಯಾಗಿತ್ತು. ಅದರಲಿ 31 ಸಾವಿರ ರೂ. ಬಳಂಜ ಶಾಲೆಗೆ ಹಾಗೂ ಉಳಿಕೆ ಮೊತ್ತವನ್ನು ಅಶಕ್ತ ಕುಟುಂಬಗಳಿಗೆ ಹಸ್ತಾಂತರಿಸಿದರು. ಟ್ರಸ್ಟ್ ಪದಾಧಿಕಾರಿಗಳು, ಮುಖ್ಯಶಿಕ್ಷಕರು, ಶಿಕ್ಷಕರು, ಅಟ್ಲಾಜೆ ಕ್ರಿಕೆಟರ್ಸ್ ತಂಡದ ಸದಸ್ಯರು ಉಪಸ್ಥಿತರಿದ್ದರು.