

ಹುಬ್ಬಳ್ಳಿ: ಆಟೋದಲ್ಲಿ ಆಭರಣವಿದ್ದ ಬ್ಯಾಗ್ ಬಿಟ್ಟು ಇಳಿದಿದ್ದ ಮಹಿಳೆಗೆ ಇಲ್ಲಿಯ ಕಮರಿಪೇಟೆ ಪೊಲೀಸರು ಆಭರಣ ಹುಡುಕಿ ಹಸ್ತಾಂತರ ಮಾಡಿದ ಘಟನೆ ಮಂಗಳವಾರ ನಡೆದಿದೆ.
ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಿದ್ದ ಅಶ್ವಿನಿ ಶಿವಶಿಂಪಿಗೇರ, ಮಧ್ಯಾಹ್ನ 12 ಗಂಟೆಗೆ ವಿಕಾಸನಗರದಿಂದ ಮೂರುಸಾವಿರ ಮಠಕ್ಕೆ ತೆರಳಿದ್ದರು. ಈ ವೇಳೆ ಆಟೋದಲ್ಲಿ ಆಭರಣವಿದ್ದ ಬ್ಯಾಗ್ ಬಿಟ್ಟು ಇಳಿದಿದ್ದಾರೆ. ಮಹಿಳೆಯ ದೂರಿನ ಮೇರೆಗೆ ಕಮರಿಪೇಟೆ ಠಾಣೆ ಪೊಲೀಸ್ ಸಿಬ್ಬಂದಿ ಬೀರೇಶ ಆನ್ವೇರಿ, ಎಂ.ಪಿ. ನಾಯಕವಾಡಿ ಅವರು ಸಿಸಿ ಕ್ಯಾಮರಾ ಮೂಲಕ ಆಟೋ ಪತ್ತೆ ಹಚ್ಚಿ ಮಹಿಳೆಗೆ 16 ಗ್ರಾಂ ತೂಕದ ಚಿನ್ನದ ನೆಕ್ಲೇಸ್ ಮರಳಿಸಿದ್ದಾರೆ.