ಚಿನ್ನಾಭರಣವುಳ್ಳ ಬ್ಯಾಗ್ ಹಸ್ತಾಂತರ

h29-kasabapeth
Published on

ಹುಬ್ಬಳ್ಳಿ: ಆಟೋದಲ್ಲಿ 49 ಸಾವಿರ ರೂ. ಮೌಲ್ಯದ ಚಿನ್ನಾಭರಣವುಳ್ಳ ಬ್ಯಾಗ್ ಮರೆತ ಪ್ರಯಾಣಿಕರಿಗೆ ಮರಳಿ ಕೊಡುವುದರ ಮೂಲಕ ನಗರದ ಆಟೋ ಚಾಲಕರೊಬ್ಬರು ಪ್ರಶಂಸೆಗೆ ಪಾತ್ರರಾಗಿದ್ದಾರೆ.

ನಸ್ರೀನ್ ಎಂಬ ಪ್ರಯಾಣಿಕರು ಆಟೋದಲ್ಲಿ ಹೋಗಿದ್ದರು. ಇಳಿಯುವಾಗ ತಮ್ಮ ಬ್ಯಾಗ್ ಮರೆತಿದ್ದರು. ಆಟೋಚಾಲಕ ನಿಸ್ಸಾರ್ ಕಣ್ಣಿಗೆ ಬ್ಯಾಗ್ ಕಂಡಿದೆ. ಕೂಡಲೇ ಕಸಬಾಪೇಟೆ ಪೊಲೀಸ್ ಠಾಣೆಗೆ ತೆರಳಿದ ಆಟೋ ಚಾಲಕ, ಬ್ಯಾಗ್ ಹಸ್ತಾಂತರಿಸಿದ್ದಾರೆ. ಬ್ಯಾಗ್ ಮಾಲೀಕರನ್ನು ಠಾಣೆಗೆ ಕರೆಸಿದ ಪೊಲೀಸ್ ಇನ್‌ಸ್ಪೆಕ್ಟರ್ ಆರ್.ಎಚ್. ಹಳ್ಳೂರ ಅವರು ಬ್ಯಾಗ್ ಹಸ್ತಾಂತರ ಮಾಡಿದ್ದಾರೆ. ಆಟೋ ಚಾಲಕನ ಪ್ರಾಮಾಣಿಕತೆಗೆ ಪೊಲೀಸರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net