

ವಿಜಯವಾಣಿ ಸುದ್ದಿಜಾಲ ಹೆಬ್ರಿ
ಉಡುಪಿ ಜಿಪಂ ವತಿಯಿಂದ ನಿರ್ಮಿಸಿದ ಸುಸಜ್ಜಿತ ಹವಾ ನಿಯಂತ್ರಿತ ಸ್ಮಾರ್ಟ್ ಕ್ಲಾಸ್ಗೆ ಒನ್ ಗುಡ್ ಸ್ಟೆಪ್ ಅವರು ನೀಡಿದ ಈ ಆಸನ ವ್ಯವಸ್ಥೆ ಇನ್ನಷ್ಟು ಮೇರಗು ನೀಡಿದೆ. ಸುಸಜ್ಜಿತ ಸ್ಮಾರ್ಟ್ ಕ್ಲಾಸ್ನಲ್ಲಿ ಕುಳಿತು ಸಿಇಟಿಯಂತ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಪಡೆಯಲು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಡಯಟ್ ಉಪಪ್ರಾಂಶುಪಾಲ ಡಾ.ಅಶೋಕ್ ಕಾಮತ್ ಹೇಳಿದರು.
ಒನ್ ಗುಡ್ ಸ್ಟೆಪ್ ಬೆಂಗಳೂರು, ಮಣಿಪಾಲ ಡಾಟ್ನೆಟ್, ಮಣಿಪಾಲ ಮಹಿಳಾ ಸಮಾಜ ವತಿಯಿಂದ ಸಿ.ಎಸ್ಆರ್ ಫಂಡ್ನಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡ್ಕ ಪದವಿ ಪೂರ್ವ ವಿಭಾಗದ ಸ್ಮಾರ್ಟ್ ಕ್ಲಾಸ್ಗೆ ನೀಡಿದ 20 ಡೆಸ್ಕ್ ಬೆಂಚ್ಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಮಾತನಾಡಿದರು.
ಒನ್ ಗುಡ್ ಸ್ಟೆಪ್ ಬೆಂಗಳೂರು ಮ್ಯಾನೆಜಿಂಗ್ ಟ್ರಸ್ಟಿ ಅಮಿತಾ ಪೈ, ಮಣಿಪಾಲ ಮಹಿಳಾ ಸಮಾಜದ ಕಾರ್ಯದರ್ಶಿ ರೂಪಾ ಕಿಣಿ, ಉಪಾಧ್ಯಕ್ಷೆ ಶಶಿಕಲಾ ರಾಜವರ್ಮ, ಸಂಸ್ಥೆಯ ಪ್ರಾಂಶುಪಾಲ ಮಂಜುನಾಥ ಭಟ್, ಎಸ್ಡಿಎಂಸಿ ಉಪಾಧ್ಯಕ್ಷ ಬಿ.ಎಲ್.ವಿಶ್ವಾಸ, ಸದಸ್ಯರಾದ ಅಶೋಕ್ ಜೋಗಿ, ವಿಜೇತ ಕುಮಾರ್, ವಿಜಯ್ ಶೆಟ್ಟಿ, ನಿಷಿತಾ ಶೆಟ್ಟಿ, ದೇವರಾಜ್ ಶಾಸ್ತ್ರಿ, ಉಪನ್ಯಾಸಕಿ ವೀಣಾ ಡಿ.ನಾಯಕ, ಜಯಶ್ರೀ, ಚಿತ್ರಕಲಾ ಶಿಕ್ಷಕ ಮೋಹನ್ ಕಡಬ ಉಪಸ್ಥಿತರಿದ್ದರು. ಉಪನ್ಯಾಸಕರಾದ ದೇವದಾಸ್ ಪ್ರಭು ಸ್ವಾಗತಿಸಿ, ನವನೀತ್ ಎ. ಕಾರ್ಯಕ್ರಮ ನಿರೂಪಿಸಿದರು.