ಬಡ ಮಹಿಳೆಗೆ ಮನೆ ಕೊಡುಗೆ

1
Published on

 ಬೆಳ್ತಂಗಡಿ: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವ್ಯಾಪ್ತಿಯ ಮಚ್ಚಿನ ಬ್ರಾಂಚ್ ಸಮಿತಿ ನೇತೃತ್ವದಲ್ಲಿ ದಾನಿಗಳ ಸಹಕಾರದೊಂದಿಗೆ ಮಚ್ಚಿನ ಗ್ರಾಮದ ಕಲ್ಲಗುಡ್ಡೆಯಲ್ಲಿ ನಿರ್ಮಿಸಿದ ಮನೆಯನ್ನು ಕಣಿಯೂರು ಬ್ಲಾಕ್ ಅಧ್ಯಕ್ಷ ಮುಸ್ತಫಾ ಬಂಗೇರಕಟ್ಟೆ ಅವರ ಸಮ್ಮುಖದಲ್ಲಿ ಬಡ ಮಹಿಳೆಗೆ ಹಸ್ತಾಂತರಿಸಲಾಯಿತು.

ಬದ್ರಿಯಾ ಜುಮ್ಮಾ ಮಸೀದಿ ಬಂಗೇರಕಟ್ಟೆ ಖತೀಬರಾದ ಸಲ್ಮಾನ್ ಅನ್ಸಾರಿ ದುವಾ ಆಶಿರ್ವಾದಗೈದರು. ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಉದ್ಘಾಟಿಸಿದರು. ಎಸ್‌ಡಿಪಿಐ ದ.ಕ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜಾತ್ತೂರು ಮನೆ ಕೀ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದರು. ಕ್ಷೇತ್ರಾಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಜಿಲ್ಲಾ ಸಮಿತಿ ಸದಸ್ಯರಾದ ಹನೀಫ್ ಪುಂಜಾಲಕಟ್ಟೆ ಭಾಗವಹಿಸಿದ್ದರು.

ಎಸ್‌ಡಿಪಿಐ ಬೆಳ್ತಂಗಡಿ ಕ್ಷೇತ್ರ ಉಪಾಧ್ಯಕ್ಷರಾದ ನಿಸಾರ್ ಕುದ್ರಡ್ಕ, ಕಾರ್ಯದರ್ಶಿ ಅಶ್ಫಾಕ್ ಪುಂಜಾಲಕಟ್ಟೆ, ಹನೀಫ್ ಟಿ.ಎಸ್., ಹಕೀಮ್, ಇಕ್ಬಾಲ್ ಬಳ್ಳಮಂಜ, ಎಸ್‌ಡಿಪಿಐ ಪಕ್ಷದ ಕಾರ್ಯಕರ್ತರು ಹಾಗೂ ಜಮಾತ್ ಬಾಂಧವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net