

ಗುರುಪುರ: ಹಲವು ಸಂಘಸಂಸ್ಥೆಗಳು ಬಡವರಿಗೆ ಮನೆ ನಿರ್ಮಿಸಿಕೊಡುತ್ತವೆ. ಆದರೆ ಇಹ್ಸಾನ್ ಟ್ರಸ್ಟ್ ಗುಣಮಟ್ಟದ ಮನೆ ನಿರ್ಮಿಸಿ ಕೊಡುವ ಮೂಲಕ ಇತರ ಸಂಘಸಂಸ್ಥೆಗಳಿಗೆ ವಾದರಿಯಾಗಿದೆ ಎಂದು ಮನಪಾ ಪ್ರತಿಪಕ್ಷದ ನಾಯಕ ಅನಿಲ್ ಕುವಾರ್ ಹೇಳಿದರು.
ಕೂಳೂರಿನ ಪಂಜಿಮೊಗರಿನ ಇಹ್ಸಾನ್ ವೆಲ್‌ಫೇರ್ ಟ್ರಸ್ಟ್‌ನ ಸುಕೂನ್ ಯೋಜನೆಯಡಿ ನಿರ್ಮಿಸಲಾದ ಮನೆಯನ್ನು ಬಡ ಕುಟುಂಬಕ್ಕೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೂಳೂರು ಮುಹಿಯುದ್ದೀನ್ ಜುವಾ ಮಸೀದಿ ಮುದರ‌್ರಿತ್ ಸಾಬಿತ್ ಸಖಾಫಿ ತಂಳ್ ಮನೆ ಹಸ್ತಾಂತರಿಸಿದರು. ಕಾವೂರು ಪೊಲೀಸ್ ಠಾಣೆಯ ನಿರೀಕ್ಷಕ ರಾಘವೇಂದ್ರ ಎಂ. ಬೈಂದೂರು ಮಾತನಾಡಿದರು. ಇಹ್ಸಾನ್ ವೆಲ್‌ಫೇರ್ ಟ್ರಸ್ಟ್‌ನ ಅಧ್ಯಕ್ಷ ನಿಸಾರ್ ಕೆ.ಎಂ. ಅಧ್ಯಕ್ಷತೆ ವಹಿಸಿದ್ದರು.
ತೈಬಾ ಅಕಾಡೆಮಿ ಪ್ರಬಂಧಕ ನಶೀರ್ ಮದನಿ ಅಲ್‌ಕಾಮಿಲ್, ಕೂಳೂರು ಮುಹಿಯುದ್ದೀನ್ ಜುವಾ ಮಸೀದಿ ಅಧ್ಯಕ್ಷ ಕೆ.ಅಬ್ಬಾಸ್, ಕೆಪಿಸಿಸಿ ಕಾರ್ಯದರ್ಶಿ ಇನಾಯತ್ ಅಲಿ, ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು, ಸಿಪಿಐಎಂ ಮುಖಂಡ ದಯಾನಂದ ಶೆಟ್ಟಿ, ಕೂಳೂರು ಕಾವೂರು ಮುಸ್ಲಿಂ ಒಕ್ಕೂಟ ಅಧ್ಯಕ್ಷ ಹುಸೈನ್ ರಿಯಾಝ್, ಅಲ್‌ಫಾರೂಕ್ ಜುವಾ ಮಸೀದಿ ಅಧ್ಯಕ್ಷ ನೌಷಾದ್ ಅಲಿ, ಇಹ್ಸಾನ್ ವೆಲ್ಫೇರ್ ಉಪಾಧ್ಯಕ್ಷ ಆಫ್ರಿದ್ ಮತ್ತಿತರರಿದ್ದರು. ಮೊಹಮ್ಮದ್ ಜುನೈನ್ ಸ್ವಾಗತಿಸಿದರು. ಶಕೀಲ್ ಕೂಳೂರು ನಿರೂಪಿಸಿದರು. ಶಾರೀಕ್ ವಂದಿಸಿದರು.