ಬಿದ್ದು ಸಿಕ್ಕಿದ್ದ ನಗದು ವಾರಸುದಾರರಿಗೆ ಹಸ್ತಾಂತರ

New Project (12)
Published on

ಉಪ್ಪಿನಂಗಡಿ: ಬಿದ್ದು ಸಿಕ್ಕಿದ 35 ಸಾವಿರ ರೂ. ನಗದು ಮತ್ತು ದಾಖಲೆ ಪತ್ರಗಳಿದ್ದ ಪರ್ಸನ್ನು ಇಲ್ಲಿನ ಉದ್ಯಮಿ ಕೈಲಾರ್ ರಾಜಗೋಪಾಲ ಭಟ್ ಎಂಬುವರು ಅದರ ವಾರಸುದಾರರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಆಟೋ ರಿಕ್ಷಾ ಚಾಲಕ ಜಬ್ಬಾರ್ ಎಂಬುವರು ಕೈಲಾರ್ ರಾಜಗೋಪಾಲ ಭಟ್ ಅವರ ಅಂಗಡಿಗೆ ಬಂದಿದ್ದ ಸಂದರ್ಭ ಅವರ ಪರ್ಸ್ ಅಂಗಡಿ ಪರಿಸರದಲ್ಲಿ ಬಿದ್ದು ಹೋಗಿತ್ತು. ಅದು ಅಂಗಡಿ ಮಾಲೀಕರಿಗೆ ಸಿಕ್ಕಿದ್ದು, ಅದರಲ್ಲಿದ್ದ ದಾಖಲೆ ಪತ್ರಗಳ ಆಧಾರದಲ್ಲಿ ವಾರಸುದಾರರನ್ನು ಗುರುತಿಸಿ ಪರ್ಸ್ ಹಸ್ತಾಂತರಿಸಿದರು. ಅವರ ಪ್ರಾಮಾಣಿಕತೆ ಶ್ಲಾಘನೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net