ವೆಂಟಿಲೇಟರ್ ಯಂತ್ರ ಹಸ್ತಾಂತರ

lifeline
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಗೋಕುಲ ರಸ್ತೆಯ 24/7 ಲೈಫ್​ಲೈನ್ ಆಸ್ಪತ್ರೆಗೆ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮತ್ತು ಶಕ್ತಿ ಗ್ರೂಪ್ ಆಫ್ ಕಂಪನಿಯ ಘಟಕವಾದ ಶಕ್ತಿ ಆಟೋ ಕಾರ್ಸ್ ಪ್ರೖೆವೇಟ್ ಲಿಮಿಟೆಡ್ ವತಿಯಿಂದ ಕಾರ್ಪೆರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್​ಆರ್) ಅಡಿಯಲ್ಲಿ ಸುಮಾರು 8.5 ಲಕ್ಷ ರೂ. ಮೌಲ್ಯದ ವೈದ್ಯಕೀಯ ವೆಂಟಿಲೇಟರ್ ಯಂತ್ರವನ್ನು ಶುಕ್ರವಾರ ಹಸ್ತಾಂತರಿಸಲಾಯಿತು.

ಶಕ್ತಿ ಗ್ರುಪ್ ಅಧ್ಯಕ್ಷ ನಾರಾಯಣರಾವ್ ತಾತುಸ್ಕರ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ ತಾತುಸ್ಕರ ಹಸ್ತಾಂತರಿಸಿದರು. ರೋಟರಿ ಅಧ್ಯಕ್ಷ ಬಾಪುಗೌಡ ಬಿರಾದಾರ, ಕಾರ್ಯದರ್ಶಿ ಎ.ವಿ.ಸಂಕನೂರ್, ಬಿ.ಬಿ. ಪಾಟೀಲ, ಮಾಧುರಿ ಕುಲಕರ್ಣಿ, ಅರವಿಂದ ಕುಬಸದ, ಎಂ.ಕೆ. ಪಾಟೀಲ, ಮಂಜುನಾಥ ಹೊಂಬಳ, ಆಸ್ಪತ್ರೆಯ ವೈದ್ಯರಾದ ಡಾ. ರಾಜೇಶ್ ಫಟಕೆ, ನಾಗರಾಜ ಟಂಕಸಾಲೆ, ಶ್ರೀನಿವಾಸ ದೇಶಪಾಂಡೆ ಹಾಗೂ ಆಸ್ಪತ್ರೆಯ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net