

ಕೋಟ: ಕೋಡಿ ಕನ್ಯಾಣ ಶ್ರೀರಾಮ ಗೆಳೆಯರ ಬಳಗ ತೃತೀಯ ವರ್ಷದ ರಾಮ ಪರ್ವದ ಪ್ರಯುಕ್ತ ಉಳಿಕೆ ಹಣವನ್ನು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಬ್ರಹ್ಮಾವರ ಮತ್ತು ಕುಂದಾಪುರ ತಾಲೂಕಿನ ಸರ್ಕಾರಿ ಶಾಲಾ ಪ್ರತಿಭಾವಂತ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ಹಸ್ತಾಂತರಿಸಲಾಯಿತು.
ಶ್ರೀರಾಮ ಗೆಳೆಯರ ಬಳಗ ಅಧ್ಯಕ್ಷ ಪುನೀತ್ ಪೂಜಾರಿ, ಕಾರ್ಯದರ್ಶಿ ಅಕ್ಷಿತ್ ಪೂಜಾರಿ, ಜತೆ ಕಾರ್ಯದರ್ಶಿ ಶಬರೀಶ್ ಮೆಂಡನ್, ಕೋಶಾಧಿಕಾರಿ ಕಾರ್ತಿಕ್ ಕುಂದರ್, ಸದಸ್ಯರಾದ ಪ್ರತಾಪ್ ಸುವರ್ಣ, ದರ್ಶನ್ ಕಾಂಚನ್, ಧನುಷ್ ಕುಂದರ್, ಭುವನ್ ಬಂಗೇರ, ಸಾತ್ವಿಕ್, ಪ್ರಜ್ವಲ್ ಖಾರ್ವಿ, ವರುಣ್ ಕುಂದರ್, ಸೌರವ್ ಪೂಜಾರಿ ಮತ್ತಿತರರು ಇದ್ದರು.