ವೀರ ಚಿಕ್ಕಪ್ಪ ಸಂಘಕ್ಕೆ ಲಾಭಾಂಶದ ಚೆಕ್ ಹಸ್ತಾಂತರ

ವೀರ ಚಿಕ್ಕಪ್ಪ ಸಂಘಕ್ಕೆ ಲಾಭಾಂಶದ ಚೆಕ್ ಹಸ್ತಾಂತರ
Published on

ಗಂಡಸಿ: ಕೆಂಕೆರೆ ಗ್ರಾಮದ ವೀರ ಚಿಕ್ಕಪ್ಪ ಸಂಘಕ್ಕೆ 69,386 ರೂ. ಲಾಭಾಂಶದ ಚೆಕ್ಕನ್ನು ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾ ಅಧಿಕಾರಿ ಕೆ.ಉದಯ್ ಹಸ್ತಾಂತರಿಸಿದರು.

ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಾಷ್ಟ್ರೀಕೃತ ಬ್ಯಾಂಕ್‌ಗಳ ಪ್ರತಿನಿಧಿಯಾಗಿದ್ದು, ಸ್ವಸಹಾಯ ಸಂಘಗಳ ಸದಸ್ಯರ ಉಳಿತಾಯದ ಜತೆಗೆ ಸಂಘದ ಸದಸ್ಯರು ಆರ್ಥಿಕವಾಗಿ ಬದುಕು ಕಟ್ಟಿಕೊಳ್ಳಲು ಬ್ಯಾಂಕ್‌ಗಳ ಮೂಲಕ ಸಾಲ- ಸೌಲಭ್ಯದ ವ್ಯವಸ್ಥೆ ಮಾಡುತ್ತಿದೆ. ಗ್ರಾಮೀಣ ಪ್ರದೇಶದ ಮಹಿಳೆಯರು ತನ್ನ ಕುಟುಂಬಕ್ಕೆ ಸೀಮಿತವಾಗದೆ ಆರ್ಥಿಕ ಸ್ವಾವಲಂಬನೆ ಜತೆಗೆ ವ್ಯವಹಾರ ಜ್ಞಾನ ವೃದ್ಧಿಗೊಳಿಸಿ ಸಂಘದ ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತರುವುದೇ ಯೋಜನೆಯ ಮುಖ್ಯ ಉದ್ದೇಶ ಎಂದರು.

ವಲಯ ಮೇಲ್ವಿಚಾರಕ ದಿನೇಶ್ ಕೊಕ್ಕಡ, ಸೇವಾ ಪ್ರತಿನಿಧಿ ಮಹಾಲಕ್ಷ್ಮೀ ಹಾಗೂ ಸಂಘದ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net