

ಮಡಿಕೇರಿ: ಜಮಾಅತೆ ಇಸ್ಲಾಮೀ ಹಿಂದ್ ಹಾಗೂ ಇತರ ದಾನಿಗಳ ಸಹಯೋಗದೊಂದಿಗೆ ನಿರ್ಮಿಸಿರುವ ಮನೆಯನ್ನು ಜಮಾಅತೆ ಇಸ್ಲಾಮೀ ಹಿಂದ್ ಜಿಲ್ಲಾಧ್ಯಕ್ಷ ಪಿ.ಕೆ.ಅಬ್ದುಲ್ ರೆಹಮಾನ್ ಫಲಾನುಭವಿಗಳಿಗೆ ಭಾನುವಾರ ಕೀ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದು ದೇಶದಲ್ಲಿ ವಸತಿ ಸೌಲಭ್ಯ ವಿಲ್ಲದೇ ಸಾಕಷ್ಟು ಜನ ಪರಿತಪಿಸುತ್ತಿದ್ದಾರೆ. ಈ ಸಂಬಂಧ ಸರ್ಕಾರ ಗಮನಹರಿಸದೇ ಇರುವುದು ವಿಷಾದನೀಯ. ಜತೆಗೆ ಸರ್ಕಾರ ಅರ್ಹರನ್ನು ಗುರುತಿಸುವುದರಲ್ಲಿ ವಿಫಲವಾಗುತ್ತಿದೆ. ಇಂತಹ ಸಂಧರ್ಭದಲ್ಲಿ ಸಂಘ ಸಂಸ್ಥೆಗಳು ಮಾನವೀಯ ಕಾರ್ಯಕ್ಕೆ ಮುಂದಾಗಿರುವುದು ಆಶಾದಾಯಕ ಬೆಳವಣಿಯಾಗಿದೆ ಎಂದು ಹೇಳಿದರು.
ತನಲ್ ಆಶ್ರಮದ ಅಧ್ಯಕ್ಷ ಮೊಹಮ್ಮದ್ ಮುಸ್ತಫಾ ಮಾತನಾಡಿ, ಮಡಿಕೇರಿ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ಏಳು ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆ. ಸಹಕರಿಸಿದ ದಾನಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಎಸ್‌ಎಸ್‌ಎಫ್ ಜಿಲ್ಲಾ ಸಂಘಟನಾ ಸದಸ್ಯರು ಹಾಗೂ ಮಡಿಕೇರಿ ಕಾಂಗ್ರೆಸ್ ಅಲ್ಪಸಂಖ್ಯಾತರ ಅಧ್ಯಕ್ಷ ಖಲೀಲ್ ಭಾಷ, ದಾನಿಗಳಾದ ಅಮೀನ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಿದ್ದಾಪುರದ ಸಮಾಜ ಸೇವಕ ಅಶ್ರಪ್ ಕುಞಾನ್, ಧಾನಿಗಳಾದ ನಾಸರ್ ಮಾಹೆ, ಮಡಿಕೇರಿ ಘಟಕದ ಸಮಾಜ ಸೇವಕ ಪಿ.ಎಂ.ಉಮ್ಮರ್ ಸ್ತಾನೀಯ, ಕಾರ್ಯದರ್ಶಿ ಅಹ್ಮದ್ ಕಬೀರ್ ಇತರರು ಉಪಸ್ಥಿತರಿದ್ದರು.