ಮಾನವೀಯತೆ ಅಳವಡಿಕೊಂಡಾಗ ಸಮಾಜದ ಉನ್ನತಿ

udp-1-kukkehalli
Published on

ಉಡುಪಿ: ಜೀವನದಲ್ಲಿ ಮಾನವೀಯತೆಯನ್ನು ಅಳವಡಿಕೊಂಡಾಗ ಮಾತ್ರ ಸಮಾಜದ ಉನ್ನತಿ ಸಾಧ್ಯವಾಗುತ್ತದೆ. ಯುವ ಜನರು ಸಾಮಾಜಿಕ ಕಾರ್ಯಗಳ ಮೂಲಕ ಮೌಲ್ಯವನ್ನು ಮೈಗೂಡಿಸಿಕೊಳ್ಳಬೇಕು ಎಂದು ನಿವೃತ್ತ ಲೋಕಾಯುಕ್ತ ಡಾ. ಸಂತೋಷ್​ ಹೆಗ್ಡೆ ಹೇಳಿದರು.
ಭಾನುವಾರ ಸಮಾನ ಮನಸ್ಕರ ತಂಡ ಕುಕ್ಕೆಹಳ್ಳಿಯಲ್ಲಿ ಲಕ್ಷಿ ಅವರಿಗಾಗಿ ನಿರ್ಮಿಸಿಕೊಟ್ಟಿರುವ 25ನೇ ಮನೆಯ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಂಡದ ಮುಖ್ಯಸ್ಥ ಶಶಿಧರ ಪುರೋಹಿತ್​ ಕಟಪಾಡಿ ಮಾತನಾಡಿ, ಸಮಾನ ಮನಸ್ಕರೆಂಬ ತಂಡವನ್ನು ರಚಿಸಿ ಗರಡೆಯಲ್ಲಿ ಮೊದಲ ಮನೆಯನ್ನು ನಿರ್ಮಿಸಲಾಯಿತು. ಕುಕ್ಕೆಹಳ್ಳಿಯಲ್ಲಿ 25ನೇ ಮನೆ ಹಸ್ತಾಂತರಗೊಂಡಿದೆ. ಇನ್ನೂ ಮೂರು ಮನೆಗಳು ನಿಮಾರ್ಣ ಹಂತದಲ್ಲಿವೆ. ವಾಟ್ಸಾಪ್​ ಗ್ರೂಪ್​ ರಚಿಸುವುದರ ಮೂಲಕ ಒಂದು ಮನೆಯ ನಿಮಾರ್ಣಕ್ಕೆ 50-60 ಮಂದಿಯನ್ನು ಗ್ರೂಪ್​ ನಲ್ಲಿ ಸೇರಿಸಿಕೊಂಡು ಹಣ ಹಾಗೂ ವಸ್ತು ರೂಪದ ಮೂಲಕ ದಾನವನ್ನು ಪಡೆದು ಮನೆಗಳನ್ನು ನಿರ್ಮಿಸುತ್ತಿದ್ದೇವೆ. ಈ ವರೆಗೆ 25 ಮನೆಗಳ ನಿಮಾರ್ಣಕ್ಕಾಗಿ ಸುಮಾರು ರೂ 2.5 ಕೋಟಿ ಹಣ ವ್ಯಯಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾಧವ ಆಚಾರ್ಯ ಪುತ್ತೂರು, ರಾಜಗೋಪಾಲ್​ ಆಚಾರ್ಯ ಕೋಟೇಶ್ವರ , ಉಪೇಂದ್ರ ಆಚಾರ್ಯ ಪೆರ್ಡೂರ್​, ರಾಘವೇಂದ್ರ ಆಚಾರ್ಯ ಕೋಟ. ಪುರಂದರ ಕೋಟ್ಯಾನ್​ ಕುಕ್ಕೆಹಳ್ಳಿ ,ಪ್ರಕಾಶ್​ ಆಚಾರ್ಯ ಕಾರ್ಕಳ, ಸತೀಶ್​ ರಾವ್​ ಮಂಗಳೂರು ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net