

ಬ್ರಹ್ಮಾವರ: ಬಂಡೀಮಠ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಓಯೇ ಫ್ರೆಂಡ್ಸ್ ಸದಸ್ಯರು ಪರಿಸರದ ರೈತರಿಂದ ಒಣ ಹುಲ್ಲು ಸಂಗ್ರಹಿಸಿ ಅನಾಥ ಗೋಶಾಲೆಗೆ ಭಾನುವಾರ ನೀಡಿದರು.
ಭಾನುವಾರ 7 ಟೆಂಪೋದಲ್ಲಿ ಸಂಗ್ರಹಿಸಿ ನೀಲಾವರ, ಆರೂರು, ಕೂರಾಡಿ ಮತ್ತು ನಂಚಾರಿನ ಅನಾಥ ಗೋಶಾಲೆಗೆ ರವಾನಿಸಿದರು.
ಉಡುಪಿ ಜಿಲ್ಲೆಯಲ್ಲಿ ಗೋವಿಗಾಗಿ ಮೇವು ವಿನೂತನ ಕಲ್ಪನೆ ರೂವಾರಿ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಬಂಡೀಮಠ ಮಾತನಾಡಿದರು. ಗಣಪತಿ ನಾಯ್ಕ, ಸುಬ್ರಹ್ಮಣ್ಯ ಪೂಜಾರಿ, ಅಶೋಕ್ ಆಚಾರ್ಯ, ನಿತಿನ್ ಕುಲಾಲ್, ಸಂತೋಷ ಶೆಟ್ಟಿ ರಾಕೇಶ್ ನಾಯ್ಕ, ಯೋಗೀಶ್ ಪೂಜಾರಿ ಮತ್ತಿತರರು ಹಾಜರಿದ್ದರು.