ಪ್ರತೀಕ್ಷಾ ಕುಟುಂಬಕ್ಕೆ ಪರಿಹಾರ ಚೆಕ್ ಹಸ್ತಾಂತರ : ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಯುವತಿ

check
ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಪ್ರತೀಕ್ಷಾ ಮನೆಯವರಿಗೆ ಮೆಸ್ಕಾಂ ಇಲಾಖೆಯ ಪರಿಹಾರವಾಗಿ 5 ಲಕ್ಷ ರೂ.ಚೆಕ್ಕನ್ನು ಶಾಸಕ ಹರೀಶ್ ಪೂಂಜ ವಿತರಿಸಿದರು.
Published on

ವಿಜಯವಾಣಿ ಸುದ್ದಿಜಾಲ ಕೊಕ್ಕಡ

ಶಿಬಾಜೆಯ ಬರ್ಗುಳದಲ್ಲಿ ಜೂ.25ರಂದು ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಯುವತಿಯ ಮನೆಯವರಿಗೆ ಮೆಸ್ಕಾಂ ಇಲಾಖೆಯ ಪರಿಹಾರವಾಗಿ 5 ಲಕ್ಷ ರೂ.ಚೆಕ್ಕನ್ನು ಶಾಸಕ ಹರೀಶ್ ಪೂಂಜ ಅವರ ಮುಖಾಂತರ ಕುಟುಂಬಸ್ಥರಿಗೆ ಶ್ರಮಿಕ ಕಾರ್ಯಾಲಯದಲ್ಲಿ ಸೋಮವಾರ ವಿತರಿಸಿದರು.

ಹರೀಶ್ ಪೂಂಜ ಮಾತನಾಡಿ, ಮೆಸ್ಕಾಂ ಇಲಾಖೆಯ ನಿರ್ಲಕ್ಷೃದಿಂದ ಯುವತಿ ಸಾವನ್ನಪ್ಪಿದ್ದರಿಂದ ಇಲಾಖೆಯಿಂದ 5 ಲಕ್ಷ ರೂ.ಪರಿಹಾರವನ್ನು ನೀಡಲಾಯಿತು. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಪರಿಹಾರ ದೊರಕಿಸುವಂತೆ ಇಲಾಖೆಗಳಿಗೆ ಹಾಗೂ ಸಚಿವರಿಗೆ ಮನವಿ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಬೆಳ್ತಂಗಡಿ ಉಪ ವಿಭಾಗದ ಸ.ಕಾ.ಇಂಜಿನಿಯರ್ ಕ್ಲೆಮೆಂಟ್ ಬೆಂಜಮಿನ್ ಬ್ರಾಗ್ಸ್, ಶಿಬಾಜೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ದಿನಕರ ಕುರುಪ್ ಬರ್ಗುಳ, ಶಿಬಾಜೆ ಗ್ರಾಪಂ ನಿಕಟಪೂರ್ವ ಅಧ್ಯಕ್ಷ ರತೀಶ್ ಗೌಡ ಹಾಗೂ ಮೃತ ಯುವತಿಯ ಕುಟುಂಬಸ್ಥರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net