ದೇವಸ್ಥಾನ ಜೀರ್ಣೋದ್ಧಾರಕ್ಕೆ ಚೆಕ್ ಹಸ್ತಾಂತರ

07sunti01 (1)
Published on

ಸುಂಟಿಕೊಪ್ಪ: ಶ್ರೀ ಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ 2.50 ಲಕ್ಷ ರೂ. ಗಳ ಚೆಕ್ ಅನ್ನು ಮಂಗಳವಾರ ಜೀರ್ಣೋದ್ಧಾರ ಸಮಿತಿಗೆ ಹಸ್ತಾಂತರಿಸಲಾಯಿತು.

ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಯೋಜನೆಯ ಸೋಮವಾರಪೇಟೆ ತಾಲೂಕು ಯೋಜನಾಧಿಕಾರಿ ಪ್ರಕಾಶ್ ಚೆಕ್ ಅನ್ನು ಸಮಿತಿ ಅಧ್ಯಕ್ಷ ವೈ.ಎಂ.ಕರುಂಬಯ್ಯ ಅವರಿಗೆ ಹಸ್ತಾಂತರಿಸಿದರು.

ಸಮಿತಿ ಉಪಾಧ್ಯಕ್ಷರಾದ ಎ.ಶ್ರೀಧರ್ ಕುಮಾರ್, ಜಗದೀಶ್ ರೈ, ಕಾರ್ಯದರ್ಶಿ ಡಾ.ಶಶಿಕಾಂತ್ ರೈ, ಸಹ ಕಾರ್ಯದರ್ಶಿ ಪಟ್ಟೆಮನೆ ಉದಯ, ಖಜಾಂಚಿ ಎಸ್.ಜಿ.ಶ್ರೀನಿವಾಸ್, ಸದಸ್ಯರಾದ ಬಿ.ಎಸ್.ಆಶೋಕ್‌ಶೇಟ್, ಪಟ್ಟೆಮನೆ.ಕೆ.ಶೇಷಪ್ಪ, ರಮೇಶ್ ರೈ, ರಾಜು ರೈ, ಶಿವು, ಯೋಜನೆಯ ಸುಂಟಿಕೊಪ್ಪ ವಲಯ ಪ್ರಭಾರ ಮೇಲ್ವಿಚಾರಕಿ ನಿರ್ಮಲಾ ಪ್ರಕಾಶ್, ಸೇವಾ ಪ್ರತಿನಿಧಿಗಳಾದ ಜ್ಯೋತಿ ಲಕ್ಷ್ಮೀ, ಮಾಲಿನಿ, ಚಿತ್ರಾ ಸುರೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net