ಹಂದಿಗುಂದ ಗ್ರಾಮದಲ್ಲಿ ಕರೊನಾ ಸಹಾಯವಾಣಿ ಕೇಂದ್ರ

11palabavi-Web
ಹಂದಿಗುಂದ ಕೊರೊನಾ ಸಹಾಯವಾಣಿ ಸೇವಾ ಕೇಂದ್ರವನ್ನು ಯುವ ಧುರೀಣ ಮಲ್ಲಿಕಾರ್ಜುನ ತೇಲಿ ಉದ್ಘಾಟಿಸಿದರು. ಪಿಡಿಒ ಸವಿತಾ ಚಿಣಗುಂಡಿ, ತಾಲೂಕು ಆರೋಗ್ಯ ನಿರೀಕ್ಷಕ ಸತೀಶ ಜಾಧವ ಪರಗೌಡ ಪಾಟೀಲ, ಶಿವಪ್ಪ ಹೊಸೂರ, ಮಲ್ಲಿಕಾರ್ಜುನ ಕೌಜಲಗಿ, ಸಂಗಪ್ಪ ಮಿರ್ಜಿ, ಕಲ್ಲಪ್ಪ ಜೇಲದ, ಸಂಗಪ್ಪ ಮಿರ್ಜಿ, ರಮೇಶ ಪಾಟೀಲ ಇದ್ದರು.
Published on

ಪಾಲಬಾವಿ: ಕರೊನಾ ವೈರಸ್‌ನ ನಿರ್ಮೂಲನೆಗಾಗಿ ಸರ್ಕಾರವು ಲಾಕ್‌ಡೌನ್ ಘೋಷಣೆ ಮಾಡಿದೆ. ನಾವೆಲ್ಲರೂ ಸುರಕ್ಷಿತವಾಗಿ ಮನೆಯಲ್ಲಿರಬೇಕು. ಮನೆಯಲ್ಲಿಯೇ ಉಳಿಯುವುದರಿಂದ ಕರೊನಾ ವೈರಸ್ ಹರಡುವುದನ್ನು ತಡೆಯಬಹುದು ಎಂದು ಯುವ ಧುರೀಣ ಮಲ್ಲಿಕಾರ್ಜುನ ತೇಲಿ ಹೇಳಿದರು.

ರಾಯಬಾಗ ತಾಲೂಕು ಹಂದಿಗುಂದ ಗ್ರಾಮದಲ್ಲಿ ಶನಿವಾರ ಕರೊನಾ ಸಹಾಯವಾಣಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹಯೋಗದಲ್ಲಿ ಸಹಾಯವಾಣಿ ಸೇವಾ ಕೇಂದ್ರ ಆರಂಭಿಸಿದ್ದೇವೆ. ಸಹಾಯವಾಣಿ ಕೂಡಾ ತೆರೆದಿದ್ದೇವೆ. ಅನಗತ್ಯವಾಗಿ ಮನೆಯಿಂದ ಹೊರಗೆ ಬರದೆ ಲಾಕ್‌ಡೌನ್ ಆದೇಶ ಪಾಲಿಸಬೇಕು. ಮಾಸ್ಕ್, ಸ್ಯಾನಿಟೈಸರ್ ಬಳಕೆ ಮಾಡಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಗ್ರಾಮಸ್ಥರು ಅಗತ್ಯ ವಸ್ತುಗಳಿಗಾಗಿ ಮೊಬೈಲ್ ಸಂಖ್ಯೆ: 7619452145, 7619402145, 8884237604 ಗೆ ಕರೆ ಮಾಡಿದರೆ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಸವಿತಾ ಚಿಣಗುಂಡಿ, ತಾಲೂಕು ಆರೋಗ್ಯ ನಿರೀಕ್ಷಕ ಸತೀಶ ಜಾಧವ, ಪರಗೌಡ ಪಾಟೀಲ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಿವಪ್ಪ ಹೊಸೂರ, ಗ್ರಾಪಂ ಸದಸ್ಯರಾದ ಮಲ್ಲಿಕಾರ್ಜುನ ಕೌಜಲಗಿ, ಕಲ್ಲಪ್ಪ ಜೇಲದ, ಸಂಗಪ್ಪ ಮಿರ್ಜಿ, ರಮೇಶ ಪಾಟೀಲ, ರಾಕೇಶ ಚಿಲ್ಲಾಳಶೆಟ್ಟಿ, ಶಂಕರಗೌಡ ಪಾಟೀಲ, ಗೌಡಪ್ಪ ಪಾಟೀಲ, ಶ್ರೀನಿವಾಸ ಚಿಕ್ಕಟ್ಟಿ, ನಂದು ನಾವಿ, ನಿಂಗಪ್ಪ ಬಿಡಕಿ ಇದ್ದರು.

ಕರೊನಾ ವೈರಸ್ ನಿಯಂತ್ರಣಕ್ಕಾಗಿ ವಿವಿಧ ಸಂಘಟನೆ ಸದಸ್ಯರು. ಸಮಾಜ ಚಿಂತಕರು ಸ್ವ ಇಚ್ಛೆಯಿಂದ ಹಂದಿಗುಂದ ಗ್ರಾಮದಲ್ಲಿ ಸಹಾಯವಾಣಿ ಕೇಂದ್ರ ಆರಂಭಿಸಿದ್ದೇವೆ. ಇದು ರಾಜ್ಯದಲ್ಲಿಯೇ ಮೊದಲ ಗ್ರಾಮವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ತುರ್ತು ಸೇವೆಗಾಗಿ ವಾಹನ ವ್ಯವಸ್ಥೆ ಮಾಡಲಾಗಿದೆ.| ಮಲ್ಲಿಕಾರ್ಜುನ ತೇಲಿ ಯುವ ಧುರೀಣ ಹಂದಿಗುಂದ ಗ್ರಾಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net