ಮೈಸೂರು ಜೆಎಸ್‌ಎಸ್ ಅರ್ಬನ್ ಹಾತ್‌ನಲ್ಲಿ ಕರಕುಶಲ ಮೇಳ

Published on

ಮೈಸೂರು: ಜೆಎಸ್‌ಎಸ್ ಮೈಸೂರು ಅರ್ಬನ್ ಹಾತ್‌ನಲ್ಲಿ ಆಯೋಜಿಸಿರುವ ಗಾಂಧಿ ಶಿಲ್ಪ ಬಜಾರ್ ಮೇಳಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಉಕೇಶ್ ಕುಮಾರ್ ಚಾಲನೆ ನೀಡಿದರು.

ಮೇಳವು ಮಾ.23 ರವರೆಗೆ ನಡೆಯಲಿದ್ದು, ಬೆಳಗ್ಗೆ 10 ರಿಂದ ರಾತ್ರಿ 9.30ರ ಅವಧಿಯೊಳಗೆ ಭೇಟಿ ನೀಡಬಹುದು. ಒಟ್ಟು 120 ಮಳಿಗೆಗಳನ್ನು ತೆರೆಯಲಾಗಿದೆ. ದೇಶದ 22ಕ್ಕೂ ಹೆಚ್ಚು ರಾಜ್ಯಗಳ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಕರಕುಶಲಕರ್ಮಿಗಳು ಹಾಗೂ ಕೈಮಗ್ಗ ನೇಕಾರರು ತಯಾರಿಸಿರುವ ಕರಕುಶಲ ಮತ್ತು ಕೆಮಗ್ಗ ಉತ್ಪನ್ನಗಳು ಒಂದೇ ಸೂರಿನಡಿ ದೊರೆಯುತ್ತಿದೆ.

ಮರದ ಕೆತ್ತನೆ, ಶಿಲಾಶಿಲ್ಪ, ಕಂಚಿನ ವಿಗ್ರಹ, ಮರದ ಕುಂದಣ ಕಲೆ, ಮಣ್ಣಿನ ಮಡಿಕೆಗಳು, ಪೇಪರ್, ರತ್ನಗಂಬಳಿ, ಹತ್ತಿ ಜಮಕಾನ, ಇಮಿಟೇಶನ್ ಆಭರಣಗಳು, ಮರದ ಅರಗಿನ ಕಲಾವಸ್ತುಗಳು, ಬಾಟಿಕ್, ಕಲಾಂಕಾರಿ ಚಿತ್ರಕಲೆ, ಚರ್ಮದ ಆಕರ್ಷಕ ವಸ್ತುಗಳು, ಕಲಾತ್ಮಕ ಚರ್ಮದ ಚಪ್ಪಲಿಗಳು, ಚನ್ನಪಟ್ಟಣದ ಗೊಂಬೆಗಳು, ಕಸೂತಿಕಲೆ, ಮಧ್ಯಪ್ರದೇಶದ ರಾಜ್ಯದ ಮಹೇಶ್ವರಿ, ಚಂದೇರಿ ಸೀರೆಗಳು, ಒಡಿಶಾ ರಾಜ್ಯದ ಪಟ್ಟ ಚಿತ್ರಗಳು ಮಾರಾಟಕ್ಕೆ ಲಭ್ಯವಿದೆ.

ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು, ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಕೈಮಗ್ಗ ಕರಕುಶಲ ಮತ್ತು ರೇಷ್ಮೆ ನಿರ್ದೇಶನಾಲಯ ನಿರ್ದೇಶಕ ಆರ್. ಅರುಣ್ ಕುಮಾರ್, ಜವಳಿ ಮಂತ್ರಾಲಯದ ಅಭಿವೃದ್ಧಿ ಆಯುಕ್ತರ ಕಚೇರಿಯ ಮಾರುಕಟ್ಟೆ ವಿಭಾಗದ ಸಹಾಯಕ ನಿರ್ದೇಶಕ ಡಿ.ಟಿ. ಮಂಜುನಾಥಸ್ವಾಮಿ, ಕರಕುಶಲ ಸೇವಾ ಕೇಂದ್ರದ ಸಹಾಯಕ ನಿರ್ದೇಶಕ ಕೆ.ಎಸ್. ಸುನಿಲ್ ಕುಮಾರ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net