

ಮಡಿಕೇರಿ: ಇಂಡಿಯನ್ ಆರ್ಟ್ಸ್ ಆ್ಯಂಡ್ ಕ್ರಾಫ್ಟ್ ಎಕ್ಸಿಮಿಷನ್ ವತಿಯಿಂದ ನಗರದ ಗಾಂಧಿ ಮೈದಾನದಲ್ಲಿ ಫೆ.೨೩ರಿಂದ ಮಾ.೨೬ರವರೆಗೆ ಕರಕುಶಲ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಎಕ್ಸಿಮಿಷನ್ ಪ್ರಮುಖರಾದ ಯೂನಸ್ ತಿಳಿಸಿದರು.
ಫೆ.೨೫ ರಂದು ಸಂಜೆ ೬ ಗಂಟೆಗೆ ನಗರಸಭೆ ಅಧ್ಯಕ್ಷ ಅನಿತಾ ಪೂವಯ್ಯ, ಪೌರಯುಕ್ತ ವಿಜಯ್ ಕುಮಾರ್ ಹಾಗೂ ನಿಸರ್ಗದಾಮ ಮಳಿಗೆ ಮಾಲೀಕ ಅಬ್ದುಲ್ ಸಲಂ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಕರ್ನಾಟಕ, ರಾಜಸ್ತಾನ, ಬಿಹಾರ್, ಹೈದರಬಾದ್, ವೆಸ್ಟ್ ಬೆಂಗಲ್, ಪಂಜಾಬ್, ದೆಹಲಿ, ಕಾಶ್ಮಿರ್ ಸೇರಿದಂತೆ ದೇಶದ ೮೦ಕ್ಕೂ ಹೆಚ್ಚು ವೈವಿಧ್ಯಮಯ ಮಳಿಗೆಗಳು ಒಂದೇ ಸೂರಿನಡಿಯಲ್ಲಿ ದೊರೆಯಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಎಂ.ಎಸ್.ಸಾಗರ್, ಅಬ್ದುಲ್ ರಜ್ಹಾಕ್ ಉಪಸ್ಥಿತರಿದ್ದರು.