

ಬೆಳವಣಿಕಿ(ತಾ.ರೋಣ): ಸ್ಥಳೀಯ ಗ್ರಾಪಂ ಆವರಣದಲ್ಲಿ ಮಂಗಳವಾರ ವಿಕಲಚೇತನರ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ವಿಶ್ವ ಅಂಗವಿಕಲರ ದಿನ ಆಚರಿಸಲಾಯಿತು. ಪಿಡಿಒ ಶಿಲ್ಪ ಕವಲೂರ ಅಂಗವಿಕಲರಿಗೆ ಗುರುತಿನ ಚೀಟಿ ವಿತರಿಸಿದರು. ನಂತರ ಮಾತನಾಡಿ, ಅಂಗವಿಕಲರು ಹಲವಾರು ಕ್ಷೇತ್ರದಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ. ಉತ್ತಮ ಸಮಾಜ ನಿರ್ಮಾಣಕ್ಕೆ ಅವರ ಕಾರ್ಯ ಮೆಚ್ಚುವಂತದ್ದು ಅಂಗವೈಕಲ್ಯ ದೇಹಕ್ಕಷ್ಟೇ ಮನಸಿಗಲ್ಲ. ದೈಹಿಕವಾಗಿ ಅಂಗವಿಕಲರಿದ್ದರೂ ಮಾನಸಿಕವಾಗಿ ಪ್ರಬುದ್ಧವಾಗಿರುತ್ತಾರೆ ಎಂದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರವೀಣ ಮಾಡಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯದರ್ಶಿ ಉಮೇಶ ಸುರಕೋಡ, ಉಪಾಧ್ಯಕ್ಷ ರೇಣುಕಾ ಕರ್ಕಿಕಟ್ಟಿ, ಸದಸ್ಯರಾದ ರಾಜಶೇಖರ ಪಾಟೀಲ, ಮಾಂತೇಶ ಶಿರೋಳ, ಸುವರ್ಣ ಶೆಗಣಿ, ಬಸವರಾಜ ಓಲೆ, ನೀಲಮ್ಮ ಪಟ್ಟಣಶೆಟ್ಟಿ, ಹನಮಂತಪ್ಪ ಬಿಂಗಿ, ಶಿವಪ್ಪ ಗೊರೇಬಾಳ, ಸುರೇಶ ಶಿವಶಿಂಪಿ, ಪರಸಪ್ಪ ವಿರಗಾರ ಹಾಜರಿದ್ದರು.