ವಿಕಲಚೇತನರ ಬಸ್​ ಪಾಸ್​ ನವೀಕರಣ

Published on

ಹುಬ್ಬಳ್ಳಿ: ವಿಕಲಚೇತನರ ರಿಯಾಯಿತಿ ಬಸ್ ಪಾಸ್ ಗಳ ಮಾನ್ಯತಾ ಅವಧಿಯು ಮುಕ್ತಾಯಗೊಂಡಿದ್ದು, ಧಾರವಾಡ ಜಿಲ್ಲೆಯ ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿ ನವೀಕರಿಸಿಕೊಳ್ಳಬಹುದಾಗಿದೆ ಎಂದು ವಾಯವ್ಯ ಸಾರಿಗೆ ಸಂಸ್ಥೆ ತಿಳಿಸಿದೆ.

ಹೊಸದಾಗಿ ಪಾಸ್ ಪಡೆಯುವವರು ಸಹ ಅರ್ಜಿ ಸಲ್ಲಿಸಿ, ವಿಭಾಗೀಯ ಕಚೇರಿ ಗ್ರಾಮಾಂತರ ವಿಭಾಗದಲ್ಲಿ ಪಾಸ್ ಪಡೆಯಬಹುದು.

ನಿತ್ಯ ಬೆಳಗ್ಗೆ 10.30ರಿಂದ ಸಂಜೆ 5ರ ವರಗೆ ವಿಕಲಚೇತನರ ರಿಯಾಯತಿ ಬಸ್ ಪಾಸ್ ಗಳನ್ನು ತಾಲೂಕುವಾರು ವಿತರಿಸಲಾಗುವುದು. ಫೆ. 29ರ ವರೆಗೆ ಎಲ್ಲ ತಾಲೂಕಿನಲ್ಲಿ ಫಲಾನುಭವಿಗಳು ಪಾಸ್ ಗಳನ್ನು ಪಡೆಯಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net