ವಿಶ್ವ ಕಿವುಡರ ದಿನಾಚರಣೆ ಹಾಗೂ ಮಕ್ಕಳ ದಂತ ತಪಾಸಣೆ

27GDG06
Published on

ಚಾಕಲೇಟ ಸೇವನೇ ಒಳ್ಳೆಯದಲ್ಲ: ಡಾ. ಉಪ್ಪಿನ

ವಿಜಯವಾಣಿ ಸುದ್ದಿಜಾಲ ಗದಗ
ನಗರದ ಸ್ಪಂದನ ಶಾಲೆಯಲ್ಲಿ ವಿಶ್ವ ಕಿವುಡರ ದಿನಾಚರಣೆ ಹಾಗೂ ಮಕ್ಕಳ ದಂತ ತಪಾಸಣೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ. ರೇವಣಸಿದ್ದೇಶ್ವರ ಉಪ್ಪಿನ, ಮಕ್ಕಳು ದಂತಯ ಬರದಂತೆ ಹಲ್ಲುಗಳನ್ನು ರಸಿಕೊಳ್ಳಬೇಕು. ಬೆಳಗ್ಗೆ ಹಾಗೂ ಸಂಜೆ ಸರಿಯಾದ ಕ್ರಮದಲ್ಲಿ ಹಲ್ಲುಜ್ಜಬೇಕು. ಸಿಹಿ ಪದಾರ್ಥ ಹಾಗೂ ಅತಿಯಾದ ಚಾಕಲೇಟ್​ ಸೇವೆನೆಯಿಂದ ಮಕ್ಕಳು ದೂರ ಇರಬೇಕು ಒಳ್ಳೆಯದಲ್ಲ ಎಂದರು.
ಎಸ್​. ಬಿ. ಬಾಗೇವಾಡಿ ಮಾತನಾಡಿ, ವಿಶೇಷ ಚೇತನ ಮಕ್ಕಳ ಆರೋಗ್ಯ ರಣೆಯತ್ತ ನಾವೆಲ್ಲರೂ ಹೆಚ್ಚು ಗಮನಹರಿಸಬೇಕು. ಸರಿಯಾದ ಜೀವನ ಕ್ರಮವನ್ನು ರೂಢೀಸಿಕೊಳ್ಳಬೇಕು ಎಂದರು.
ಶಾಲಾ ಮಕ್ಕಳಿಂದ ಸಾಂಸತಿಕ ಕಾರ್ಯಕ್ರಮ ಜರುಗಿದವು. ಬಾಬು ಬಾಕಳೆ, ಎಸ್​. ಎ್​. ದ್ಯಾವನಗೌಡ್ರ, ಎಸ್​. ಎಸ್​. ಹೊಸಳ್ಳಿಮಠ, ಲಲಿತಾ ಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net