

ವಿಜಯವಾಣಿ ಸುದ್ದಿಜಾಲ ಗದಗ
ವಿಶೇಷಚೇತನರಿಗೆ ಶಿಣ, ಆರೋಗ್ಯ, ಕೌಶಲ್ಯ ತರಬೇತಿ ಮತ್ತು ಉದ್ಯೋಗ ಆಧಾರಿತ ತರಬೇತಿಯನ್ನು ನೀಡಿ, ಸಮಾಜದಲ್ಲಿ ಗೌರವದಿಂದ ಬದುಕು ಕಟ್ಟಿಕೊಳ್ಳುವಂತೆ ವಿಶ್ವ ಕಲ್ಯಾಣ ಸಂಸ್ಥೆ ಮಾಡುತ್ತಿರುವ ಕಾರ್ಯ ಶ್ಲಾನೀಯ ಎಂದು ಅಭಿನವ ಪಂಚಾರ ಶಿವಾಚಾರ್ಯ ಶ್ರಿಗಳು ಹೇಳಿದರು.
ನಗರದ ಶ್ರೀನಿವಾಸ ಭವನದಲ್ಲಿ ಬುಧವಾರ ಜರುಗಿದ ವಿಕಲಚೇತನರ ಸಮ್ಮೇಳನ, ಸನ್ಮಾನ ಹಾಗೂ ವಿಕಲಚೇತನರ ಸಾಮೂಹಿಕ ವಿವಾಹ ಕಲ್ಯಾಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಎಲ್ಲ ಜಾತಿ, ಮತ ಹಾಗೂ ಧರ್ಮಗಳನ್ನು ಮೀರಿದ ಈ ಸೇವಾ ಕಾರ್ಯವನ್ನು ದೇವರು ಮೆಚ್ಚುತ್ತಾನೆ. ವಿಕಲಚೇತನರನ್ನು ಸಮಾಜದ ಮುಖ್ಯವಾಹಿನಿಗೆ ಬಮದು ವೈವಾಹಿಕ ಜೀವನ ನಡೆಸಲು ಸಾಧ್ಯವೆಂದು ವಿವಾಹ ಕಲ್ಯಾಣೋತ್ಸವನ್ನು ಮಾಡುವುದರ ಮೂಲಕ ಈಡೀ ಸಮಾಜಕ್ಕೆ ವಿಶ್ವ ಕಲ್ಯಾಣ ಸಂಸ್ಥೆ ತೋರಿಸಿಕೊಟ್ಟಿದೆ ಎಂದರು.
ಗ್ರಾಮಿಣಾಭಿವೃದ್ಧಿ ವಿವಿ ಕುಲಪತಿ ವಿಷ್ಣುಕಾಂತ ಚಟಪಲ್ಲಿ ಮಾತನಾಡಿ, ವಿಶ್ವವಿದ್ಯಾಲಯ ಹಾಗೂ ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ಪ್ರಾಥಮಿಕ ಹಂತದಲ್ಲಿ ವಿಕಲತೆಯನ್ನು ಪತ್ತೆ ಹಚ್ಚುವ ಹಾಗೂ ಅದಕ್ಕೆ ಸೂಕ್ತವಾದ ತರಬೇತಿ ನೀಡುವ ಕೇಂದ್ರವನ್ನು ಜಿಲ್ಲಾ ಆಸ್ಪತ್ರೆಯಲ್ಲಿ ತೆರೆಯಲಾಗಿದೆ. ವಿಶೇಷಚೇತನರಿಗೆ ಸೂಕ್ತವಾದ ಅವಕಾಶ ಹಾಗೂ ವೇದಿಕೆಯನ್ನು ಕಲ್ಪಸುವ ಮೂಲಕ ವಿಶೇಷಚೇನರಿಗೆ ಶಕ್ತಿಯನ್ನು ತುಂಬುವ ಕೆಲಸವನ್ನು ಸಂಸ್ಥೆಯು ಮಾಡುತ್ತಿದೆ. ಈ ಸೇವಾ ಕಾರ್ಯಕ್ಕೆ ನಾನು ಕೂಡ ಒಬ್ಬನಾಗಿ ಸಹಾಯ ಸಹಕಾರ ನೀಡುತ್ತೇನೆ ಎಂದರು ಹೇಳಿದರು.
ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಟಕದ ಅಧ್ಯಕ್ಷ ಡಾ. ಅರ್ಜುನ ಗೊಳಸಂಗಿ ಮಾತನಾಡಿ, ವಿಶೇಷಚೇತನರಿಗೆ ಅಯ್ಯೋ ಪಾಪವೆಂದು ಅನುಕಂಪವನ್ನು ತೋರಿಸದೇ ಮುಕ್ತವಾದ ಅವಕಾಶವನ್ನು ಕಲ್ಪಸಿ ಕೊಟ್ಟು, ಸಮಾಜದ ಮುಖ್ಯವಾಹಿನಿಯಲ್ಲಿ ಗೌರವಯುತವಾದ ಜೀವನ ನಡೆಸಲು ಬೇಕಾಗುವ ಸೂಕ್ತವಾದ ವಾತಾವರಣವನ್ನು ನಿಮಿರ್ಸುವ ಕೆಲಸ ಆಗಬೇಕು ಎಂದರು.
ಮೌಲಾನಾ ಮಹ್ಮದ್ರಫಿಕ್ ಮಾಜಿಹಿರಿ, ಯೆಹೆಜ್ಕೇಲ ಪೂಜಾರ, ವಿವೇಕ ಯಾವಗಲ್ಲ, ತಿಪ್ಪಣ್ಣ ಸಾಲಿಬಾನಿ, ಮಂಜುನಾಥ ಹದ್ದಣ್ಣವರ, ಸಿದ್ಧಲಿಂಗೇಶ ಕೋಣನವರ. ಈಶಣ್ಣ ಹುಣಶೀಕಟ್ಟಿ. ಚಂದ್ರಶೇಖರ ಹುಣಶೀಕಟ್ಟಿ. ಗುರುಸಿದ್ಧಪ್ಪ ಕೊರವನವರ. ಮಲ್ಲಿಕಾರ್ಜುನ ಕಾಂಬಳೆ, ಶೈಲೇಂದ್ರ ಶೆಂಬೇಕರ, ಚನ್ನಪ್ಪ ಸತ್ಯಪ್ಪನ್ನವರ, ಈರಣ್ಣ ಕಾಂಬಳೆ. ಲಿಂಗರಾಜ ನಿಡುವಣಿ ಇತರರು ಇದ್ದರು.