

ವಿಜಯವಾಣಿ ಸುದ್ದಿಜಾಲ ಹಂದನಕೆರೆ
ನೂರಕ್ಕೂ ಹೆಚ್ಚು ದೇವಾಲಯ ಹೊಂದಿರುವ ಹೋಬಳಿ ಕೇಂದ್ರ ಹಂದನಕೆರೆಯಲ್ಲಿ ಐತಿಹಾಸಿಕ ಬಾವಿಗಳೂ ಸೂಕ್ತ ನಿರ್ವಹಣೆ ಇಲ್ಲದೆ ಹಾಳಾಗುತ್ತಿವೆ. ಬಸ್ ನಿಲ್ದಾಣದ ಸಮೀಪದಲ್ಲಿಯೇ ಇರುವ ಪುರಾತನವಾದ, ಒಂದು ಕಾಲದಲ್ಲಿ ಇಡೀ ಗ್ರಾಮದ ಜನರು ಕುಡಿಯಲು ಆಶ್ರಯಿಸಿದ್ದ ಸಿಹಿ ನೀರಿನ ಬಾವಿ ಕಸ ತುಂಬುವ ತೊಟ್ಟಿಯಾಗಿದೆ. ಎಂತಹ ಬರಗಾಲದಲ್ಲಿಯೂ ಈ ಬಾವಿಯಲ್ಲಿ ನೀರು ಬತ್ತಿದ ಉದಾಹರಣೆ ಇಲ್ಲ. ಆದರೆ, ಮದ್ಯದ ಪಾಕೆಟ್, ಟೀ ಲೋಟ ಸೇರಿದಂತೆ ಬಸ್ ನಿಲ್ದಾಣದ ಅಂಗಡಿಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನೆಲ್ಲಾ ಇದೇ ಬಾವಿಗೆ ಸುರಿಯುತ್ತಿರುವುದರಿಂದ ಬಾವಿಯಲ್ಲಿ ನೀರಿದ್ದರೂ ಬಳಸಲಾಗದೆ ನಿರುಪಯುಕ್ತವಾಗಿದೆ. ಕಳೆದ ಒಂದು ವರ್ಷದಿಂದಲೂ ಬಾವಿಯನ್ನು ಬಳಕೆಗೆ ಯೋಗ್ಯವಾಗುವಂತೆ ಕ್ರಮಕೈಗೊಳ್ಳಲು ಸ್ಥಳಿಯ ಗ್ರಾಮ ಪಂಚಾಯಿತಿಗೆ ಸ್ಥಳಿಯರು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ಹಂದನಕೆರೆಯಲ್ಲಿ ಸಾಕಷ್ಟು ಐತಿಹಾಸಿಕ ಪುರಾವೆಗಳು ಸ್ಥಳಿಯ ಆಡಳಿತದ ರ್ನಿಲಕ್ಷ$್ಯದಿಂದ ನಾಶವಾಗಿವೆ. ಜನರಿಗೆ ಬಳಕೆಗೆ ಯೋಗ್ಯವಾಗಿರುವ ಸಿಹಿ ನೀರಿನ ಬಾವಿಯೂ ಕಸದ ತೊಟ್ಟಿಯಾಗಿ ಮಾರ್ಪಾಡಾಗಿದೆ. ಈ ಬಗ್ಗೆ ಗ್ರಾಪಂ ಪಿಡಿಒಗೆ ಸಾಕಷ್ಟು ಸಲ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಮೇಲಧಿಕಾರಿಗಳು ಗಮನಹರಿಸಿ ಭಾವಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಬೇಕಿದೆ. ಶ್ರೀನಿವಾಸ ಸಬ್ಬೇನಹಳ್ಳಿ ಸ್ಥಳಿಯ ನಿವಾಸಿ