ವಾರಸುದಾರರ ಕೈ ಸೇರಿದ ಮೊಬೈಲ್‌ಗಳು

24blrp2
ಅರೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಫೋನ್ ಕಳೆದು ಕೊಂಡಿದ್ದವರಿಗೆ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ ಹಚ್ಚಿ ವಾರಸುದಾರರಿಗೆ ಒಪ್ಪಿಸಿದರು.
Published on

ಬೇಲೂರು: ತಾಲೂಕಿನ ಅರೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದು ಹೋಗಿದ್ದ ಮೊಬೈಲ್ ಫೋನ್‌ಗಳನ್ನು ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ ಹಚ್ಚಿ ವಾರಸುದಾರರಾಗಿ ಪಿಎಸ್‌ಐ ಶೋಭಾ ಬಿರಾದಾರ್ ಸೋಮವಾರ ವಿತರಿಸಿದರು.

ಫೋನ್ ಕಳೆದುಕೊಂಡಿದ್ದ ಅಜಿತ್ ಮಾತನಾಡಿ, ನನ್ನ ಫೋನ್ ಕೆಲ ದಿನಗಳ ಹಿಂದೆ ಕಳೆದು ಹೋಗಿತ್ತು. ಈ ಬಗ್ಗೆ ಅರೇಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದೆ. ಕೆಲವೇ ದಿನಗಳಲ್ಲಿ ಇಲ್ಲಿನ ಪಿಎಸ್‌ಐ ಶೋಭಾ ಮತ್ತು ಸಿಬ್ಬಂದಿ ಕಳೆದು ಹೋಗಿದ್ದ ಮೊಬೈಲ್ ಫೋನನ್ನು ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ ಹಚ್ಚಿ ವಾಪಸ್ ಕೊಟ್ಟಿರುವುದು ಶ್ಲಾಘನೀಯವಾಗಿದೆ. ಅವರಿಗೂ ಮತ್ತು ಅವರ ಪೊಲೀಸ್ ಠಾಣೆ ಸಿಬ್ಬಂದಿಗೆ ಅಭಿನಂದೆ ಸಲ್ಲಿಸುತ್ತೇನೆ ಎಂದರು.

ಮೊಬೈಲ್ ಕಳೆದುಕೊಂಡು ವಾಪಸ್ ಪಡೆದ ಚೇತನ್, ಸುರೇಶ್ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net