ಕವಿತಾಳ: ರಾಜ್ಯದ ಮೂರು ವಿಧಾನಸಭೆ ಚುನಾವಣೆಯಲ್ಲಿ ಆಯೋಜಿಸಿದ್ದ ಉಪ ಚುನಾವಣೆಯಲ್ಲಿ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರಕ್ಕೆ ಸಿಪಿ.ಯೋಗೇಶ್ವರ, ಸಂಡೂರು ವಿಧಾನಸಭೆ ಕ್ಷೇತ್ರಕ್ಕೆ ಅನ್ನಪೂರ್ಣ ತುಕಾರಾಂ ಮತ್ತು ಶಿಗ್ಗಾವಿ ವಿಧಾನಸಭೆಗೆ ಯಾಸಿರ್ ಅಹಮ್ಮದ್ ಖಾನ್ ಪಠಾಣ ಸೇರಿದಂತೆ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ವಿಜಯಿಯಾದ ಪ್ರಯುಕ್ತ ಪಾಮನಕಲ್ಲೂರು, ಹಾಲಾಪುರ, ಅಮೀನಗಡ, ಕವಿತಾಳ ಸೇರಿದಂತೆ ವಿವಿಧೆಡೆ ವಿಜಯೋತ್ಸವ ಆಚರಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೆಂಕಟರಡ್ಡಿ, ಪ್ರಮುಖರಾದ ಸೂರ್ಯಪ್ರಕಾಶ ಸ್ವಾಮಿ ತೋರಣದಿನ್ನಿ, ಕೃಷ್ಣ ಹಿರೇದಿನ್ನಿ ಕ್ಯಾಂಪ್, ಅಮರೆಗೌಡ ಅಮೀನಗಡ ಸೇರಿದಂತೆ ಪ್ರಮುಖರು ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.