

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಶ್ರೀಮತಿ ವಿದ್ಯಾ ಪಿ. ಹಂಚಿನಮನಿ ಅಂತಾರಾಷ್ಟ್ರೀಯ ಶಾಲೆಯ ಶೈಕ್ಷಣಿಕ ವರ್ಷಾರಂಭದ ಅಂಗವಾಗಿ ಶುಕ್ರವಾರ 1ನೇ ತರಗತಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು.
ಸರಸ್ವತಿ ಮತ್ತು ಗಣಪತಿಯ ಪೂಜೆ ನೆರವೇರಿಸಿ ಹೆತ್ತವರ ಮಡಿಲಲ್ಲಿ ಮಕ್ಕಳನ್ನು ಕೂರಿಸಿ ಅಕ್ಷರಗಳನ್ನು ಬರೆಸಲಾಯಿತು. ವಿಪಿಎಚ್ ಪಿಯು ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕ ಭೀಮಸೇನಾಚಾರ್ಯ ಮಳಗಿ ಕಾರ್ಯಕ್ರಮ ನಿರ್ವಹಿಸಿದರು. ಪ್ರಾಚಾರ್ಯ ವಿದ್ವಾನ್ ನವೀನ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಂತೇಶ ಎಜುಕೇಶನ್ ಸೊಸೈಟಿಯ ಸಹ ಕಾರ್ಯದರ್ಶಿ ವರ್ಷಾ ಹಂಚಿನಮನಿ ಮಕ್ಕಳಿಗೆ ಸಿಹಿ ವಿತರಿಸಿದರು.
ಸಂಸ್ಥೆಯ ಚೇರ್ಮನ್ ಪ್ರೊ. ಪ್ರಲ್ಹಾದ ಹಂಚಿನಮನಿ ಗೌರವ ಉಪಸ್ಥಿತರಿದ್ದರು. ಶಿಕ್ಷಕರಾದ ವಿನುತಾ ಪಾಟೀಲ, ಚೈತ್ರಾ ಜೋಶಿ, ಇತರರಿದ್ದರು.