ಬೆಳೆವಿಮೆ ಕಂತು ತುಂಬಲು ಜು. 31 ಕೊನೆ ದಿನ

21-bele vime adake
Published on

ಹಾನಗಲ್ಲ: ಪ್ರಸಕ್ತ ವರ್ಷದಲ್ಲಿ ಮರು ವಿನ್ಯಾಸಗೊಳಿಸಿರುವ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ತೋಟಗಾರಿಕೆ ಬೆಳೆಗಳಾದ ಅಡಕೆ, ಶುಂಠಿ, ಹಸಿ ಮೆಣಸಿನಕಾಯಿ, ಮಾವು ಬೆಳೆಗಳಿಗೆ ಬೆಳೆ ವಿಮೆ ಪಾವತಿಸಲು ಜು. 20ರಿಂದ ಅವಕಾಶ ಕಲ್ಪಿಸಲಾಗಿದೆ. ರೈತರು ಕೂಡಲೇ ಹೆಸರು ನೋಂದಾಯಿಸಬೇಕು ಎಂದು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಬಣಕಾರ ತಿಳಿಸಿದ್ದಾರೆ.
ಪ್ರಕಟಣೆ ನೀಡಿರುವ ಅವರು, ಬೆಳೆವಿಮೆ ಕಂತು ತುಂಬಲು ಜು. 31 ಕೊನೆಯ ದಿನವಾಗಿದೆ. ಕೊನೆಯ ದಿನದವರೆಗೂ ಕಾಯದೇ ಮುಂಚಿತವಾಗಿ ಕಂತು ಪಾವತಿಸಬೇಕು. ತೋಟಗಾರಿಕೆ ರೈತರು ತಮ್ಮ ಹತ್ತಿರದ ಬ್ಯಾಂಕ್, ಗ್ರಾಹಕ ಸೇವಾ ಕೇಂದ್ರ, ಗ್ರಾಮ ಒನ್, ಬಾಪೂಜಿ ಕೇಂದ್ರ, ಕರ್ನಾಟಕ ಒನ್ ಕೇಂದ್ರಗಳಲ್ಲಿ ವಿಮೆ ಕಂತನ್ನು ಪಾವತಿಸಬಹುದಾಗಿದೆ. ಬೆಳೆ ವಿಮೆ ತುಂಬಿದ ನಂತರ ಎಲ್ಲ ರೈತರು ಕಡ್ಡಾಯವಾಗಿ ಬೆಳೆ ಸಮೀಕ್ಷೆ ಮಾಡಬೇಕು. ಬೆಳೆ ಸಮೀಕ್ಷೆ ಮಾಡದಿದ್ದಲ್ಲಿ ಬೆಳೆವಿಮೆ ಪರಿಹಾರದಿಂದ ವಂಚಿತರಾಗುತ್ತಾರೆ. ಹೀಗಾಗಿ, ಬೆಳೆ ಸಮೀಕ್ಷೆ ಕೈಗೊಳ್ಳುವುದನ್ನು ರೈತರು ಅಲಕ್ಷಿಸಬಾರದು. ರೈತರು ಪ್ರತಿ ಹೆಕ್ಟೇರ್ ಅಡಕೆಗೆ 6,400 ರೂ, ಮಾವು 4,000 ರೂ., ಶುಂಠಿ 6,500 ರೂ., ಹಸಿ ಮೆಣಸಿನಕಾಯಿಗೆ 3,550 ರೂ. ಕಂತು ಪಾವತಿಸಬೇಕು ಎಂದು ಮಂಜುನಾಥ ಬಣಕಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net