

ಹಾನಗಲ್ಲ: ಪಟ್ಟಣದ ಗ್ರಾಮದೇವಿ ಜಾತ್ರೆಗೆ ಹೋಗಿದ್ದ ವ್ಯಕ್ತಿಯೊಬ್ಬ ರೇಣುಕಾ ದಾಬಾ ಹಿಂದೆ ಖುಲ್ಲಾ ಜಾಗದಲ್ಲಿ ಬಿದ್ದು ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
ತಾಲೂಕಿನ ಮಲ್ಲಿಗಾರ ಗ್ರಾಮದ ದೇವರಾಜ ಮೂಖಪ್ಪ ಕತ್ಲಿ (40) ಮೃತ ವ್ಯಕ್ತಿ.
ಈತ ಜಾತ್ರೆಗೆ ಹೋದಾಗ ಎರಡ್ಮೂರು ದಿನದಿಂದ ಆಹಾರ ನೀರು ಇಲ್ಲದೆ ಸುಸ್ತಾಗಿ ರೇಣುಕಾ ದಾಬಾ ಹಿಂದೆ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಆದರೆ, ನನ್ನ ಪತಿ ಸಾವಿನಲ್ಲಿ ಸಂಶಯವಿದ್ದು ಈ ಕುರಿತು ತನಿಖೆ ನಡೆಸುವಂತೆ ಮೃತನ ಪತ್ನಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಈ ಕುರಿತು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.