25 ಲಕ್ಷ ರೂ. ಗೆದ್ದಿದ್ದೀರಿ ಎಂದು 3 ಲಕ್ಷ ರೂ. ವಂಚಿಸಿದ ಸೈಬರ್ ಖದೀಮರು

Cibra
Published on

ಹಾನಗಲ್ಲ: ಆನ್‌ಲೈನ್ ಗೇಮ್‌ನಲ್ಲಿ 3 ಲಕ್ಷ ರೂ. ಹಾಕಿಸಿಕೊಂಡು ನೀವು 25 ಲಕ್ಷ ರೂ. ಗೆದ್ದಿದ್ದೀರಿ ಎಂದು ಹೇಳಿ ನಯಾಪೈಸೆ ವಾಪಸ್ ಕೊಡದೆ ಮೋಸ ಮಾಡಿದ ಕುರಿತು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.
ತಾಲೂಕಿನ ನಿಸ್ಸೀಂಆಲದಕಟ್ಟಿ ಗ್ರಾಮದ ವೀರಣ್ಣ ದೊಡ್ಡಬಸಪ್ಪ ಮಲ್ಲೂರ (28) ಮೋಸ ಹೋದವರು.
ಇವರ ಮೊಬೈಲ್‌ಗೆ ಯಾರೋ ದುಷ್ಕರ್ಮಿಗಳು ಟೆಲಿಗ್ರಾಂ ಆ್ಯಪ್‌ನಲ್ಲಿ ರೆಪರೆನ್ಸ್ ಲಿಂಕನ್ನು ಕಳುಹಿಸಿ ವಾಟವಾಡಿ ಹಣ ಗೆಲ್ಲಿ ಎಂದು ಪ್ರಚೋದನೆ ನೀಡಿದ್ದಾರೆ. ಇವರು ವೆಬ್‌ಸೈಟ್‌ನಲ್ಲಿ ಆಟವಾಡಿ ಮೂರು ದಿನದಲ್ಲಿ 3 ಲಕ್ಷ ರೂ. ಹಾಕಿದ್ದಾರೆ. ಅವರಿಗೆ ವಾಪಸ್ ನೀವು 25 ಲಕ್ಷ ರೂ. ಗೆದ್ದಿದ್ದೀರಿ ಎಂದು ಮೇಸೆಜ್ ಕಳುಹಿಸಿದ ದುಷ್ಕರ್ಮಿಗಳು ನಂತರ ವೆಬ್‌ಸೈಟ್ ನಿಷ್ಕೀಯಗೊಳಿಸಿ ಮೋಸ ಮಾಡಿದ್ದಾರೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net