ಹಾನಗಲ್ಲ ಗ್ರಾಮದೇವಿ ಜಾತ್ರೆ ಬ್ಯಾನರ್ ಬಿಡುಗಡೆ

HNL JATRE
Published on

ಹಾನಗಲ್ಲ: ಪಟ್ಟಣದ ಅಧಿದೇವತೆ ಗ್ರಾಮದೇವಿ ಜಾತ್ರಾ ಮಹೋತ್ಸವ 2025ರ ಮಾ. 18ರಿಂದ 26ರವರೆಗೆ ಜರುಗಲಿದೆ. ಶುಕ್ರವಾರ ಗ್ರಾಮದೇವಿಗೆ ವಿಶೇಷ ಪೂಜೆ ಸಲ್ಲಿಸಿ ಜಾತ್ರಾ ಮಹೋತ್ಸವದ ಬ್ಯಾನರ್ ಬಿಡುಗಡೆಗೊಳಿಸಲಾಯಿತು.

ಜಾತ್ರಾ ಮಹೋತ್ಸವ ಸಮಿತಿ ಸಂಚಾಲಕ ರಾಜು ಗೌಳಿ ಮಾತನಾಡಿ, ‘ಪಟ್ಟಣದಲ್ಲಿ ಪ್ರತಿ 3 ವರ್ಷಗಳಿಗೊಮ್ಮೆ ಜರುಗುವ ಗ್ರಾಮದೇವಿ ಜಾತ್ರೆಯ ಸಿದಟಛಿತೆಗಾಗಿ ಸದ್ಭಕ್ತರ ಹಲವು ಸಭೆಗಳನ್ನು ನಡೆಸಲಾಗಿದೆ. ಜಾತ್ರಾ ಸಮಿತಿಯ ನೂತನ ಪದಾಧಿಕಾರಿಗಳು ಹಾಗೂ ಉಪಸಮಿತಿಯ ಆಯ್ಕೆ ಪ್ರಕ್ರಿಯೆ ನಡೆದಿವೆ. ಎಲ್ಲ ಸದ್ಭಕ್ತರ ಸಹಾಯ, ಸಹಕಾರದಿಂದ ಗ್ರಾಮದೇವಿ ದೇವಸ್ಥಾನದ ಕಟ್ಟಡ ನಿರ್ಮಾಣ ಕಾಮಗಾರಿ ಶೇ. 90ರಷ್ಟು ಪೂರ್ಣಗೊಂಡಿದೆ. ನಮ್ಮೂರ ಜಾತ್ರೆಯ ಯಶಸ್ಸಿಗಾಗಿ ಹಿಂದಿನ ಸಮಿತಿಯ ಹಿರಿಯರ ಮಾರ್ಗದರ್ಶನದಲ್ಲಿ, ನೂತನ ಸಮಿತಿ ಕಾರ್ಯ ನಿರ್ವಹಿಸಲಿದೆ. ಶಾಸಕ ಶ್ರೀನಿವಾಸ ಮಾನೆ ಅವರ ಸಹಕಾರದಲ್ಲಿ ಜಾತ್ರೆಗೆ ಮೂಲಸೌಕರ್ಯ ಒದಗಿಸಲಾಗುವುದು’ ಎಂದರು.

ವೇ.ಮೂ. ಶಂಕರಭಟ್ರು ಜೋಶಿ, ಪುರಸಭೆ ಅಧ್ಯಕ್ಷೆ ಮಮತಾ ಆರೇಗೊಪ್ಪ, ಉಪಾಧ್ಯಕ್ಷೆ ವೀಣಾ ಗುಡಿ, ಸದಸ್ಯರಾದ ಪರಶುರಾಮ ಖಂಡೂನವರ, ಮಹೇಶ ಪವಾಡಿ, ವಿರೂಪಾಕ್ಷಪ್ಪ ಕಡಬಗೇರಿ, ಡಿ.ಜಿ. ಕುಲಕರ್ಣಿ, ನಾಗರಾಜ ಉದಾಸಿ, ಮಂಜಣ್ಣ ನಾಗಜ್ಜನವರ, ಭೋಜರಾಜ ಕರೂದಿ, ಗಣೇಶ ಮೂಡ್ಲಿ, ಚಂದ್ರು ಉಗ್ರಣ್ಣನವರ, ಬಾಳಾರಾಮ ಗುರ್ಲಹೊಸೂರ, ಆದರ್ಶ ಶೆಟ್ಟಿ, ಗುರುರಾಜ ನಿಂಗೋಜಿ, ನಾಗೇಂದ್ರ ಬಂಕಾಪುರ, ರಾಜು ಗುಡಿ, ಬಸವರಾಜ ಹಾದಿಮನಿ, ರಾಮು ಯಳ್ಳೂರ, ಅಜೇಯ ರೂಗಿಶೆಟ್ಟರ, ದಯಾನಂದ ನಾಗಜ್ಜನವರ, ಯಲ್ಲಪ್ಪ ಶೇರಖಾನಿ, ನಾಗಪ್ಪ ಬೆಂಚಳ್ಳಿ, ಹನುಮಂತ ಬಾಳೂರ, ಪಿ.ಕೆ. ಪಾರಗಾಂವಕರ, ರಾಜು ಶಿರಪಂತಿ, ಸಣ್ಣಪ್ಪ ನಿಂಗೋಜಿ, ಮಾಲತೇಶ ಕೊಲ್ಲಾಪುರ, ಮನೋಜ ಕಲಾಲ, ಸೂರಜ ರೇವಡಿಗಾರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net