

ಹಾನಗಲ್ಲ: ವ್ಯಕ್ತಿಯೊಬ್ಬನ ಬೆರಳು ಮುದ್ರೆಗಳ ಗುರುತನ್ನು ಕಳ್ಳತನ ಮಾಡಿ ಆತನ ಎರಡು ಬ್ಯಾಂಕ್ ಖಾತೆಗಳಿಂದ ಒಟ್ಟು 20 ಸಾವಿರ ರೂ.ಅನ್ನು ಎಪಿಇಎಸ್ (ಆಧಾರ್ ಎನೇಬಲ್ಡ ಪೇಮೆಂಟ್ ಸಿಸ್ಟಂ) ಮೂಲಕ ವರ್ಗಾಯಿಸಿಕೊಂಡ ಪ್ರಕರಣದ ಕುರಿತು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.
ಪಟ್ಟಣದ ಶಂಕರಮಠದ ಶರತ್ಚಂದ್ರ ಬಾಬುರಾವ ದೇಸಾಯಿ (60) ಎಂಬುವರು ಮೋಸ ಹೋದವರು.
ಯಾರೋ ಆರೋಪಿಗಳು ಇವರ ಬೆರಳು ಮುದ್ರೆಗಳ ಗುರುತುಗಳನ್ನು ಕಳ್ಳತನ ಮಾಡಿಕೊಂಡು ಕೆನರಾ ಬ್ಯಾಂಕ್ ಖಾತೆಯಿಂದ 10 ಸಾವಿರ ರೂ. ಹಾಗೂ ಎಸ್‌ಬಿಐ ಬ್ಯಾಂಕ್ ಖಾತೆಯಿಂದ 10 ಸಾವಿರ ರೂ.ಅನ್ನು ಎಪಿಇಎಸ್ (ಆಧಾರ್ ಎನೇಬಲ್ಡ ಪೇಮೆಂಟ್ ಸಿಸ್ಟಂ) ಮೂಲಕ ಬೇರೆ ಖಾತೆಗೆ ವರ್ಗಾವಣೆ ಮಾಡಿಕೊಂಡು ಮೋಸ ಎಸಗಿದ್ದಾರೆ ಎನ್ನಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.