ಸತತ ಪರಿಶ್ರಮದಿಂದ ಉತ್ತಮ ಸಾಧನೆ ಸಾಧ್ಯ

16hvr-mane pu colege
Published on

ಹಾನಗಲ್ಲ: ಸತತ ಪರಿಶ್ರಮದಿಂದ ಮಾತ್ರ ನಿರೀಕ್ಷಿತ ಫಲಿತಾಂಶ ಸಾಧಿಸಲು ಸಾಧ್ಯ. ಇದು ಪ್ರತಿಭೆಗಳಿದ್ದವರ ಕಾಲಘಟ್ಟ. ಜಾಗತಿಕ ಮಟ್ಟದಲ್ಲಿ ಎಲ್ಲರೊಂದಿಗೆ ಸ್ಪರ್ಧಿಸಿ ಮುನ್ನಡೆಯುವ ಅನಿವಾರ್ಯತೆ ಇದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ವಿದ್ಯಾರ್ಥಿಗಳ ಒಕ್ಕೂಟ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ಪಠ್ಯದೊಂದಿಗೆ ಬದುಕಿನ ಶಿಕ್ಷಣ ನೀಡುವುದು ಇಂದಿನ ಅಗತ್ಯವಾಗಿದೆ. ಇರುವ ಸಮಯವನ್ನು ಪ್ರಾಮಾಣಿಕ ಪರಿಶ್ರಮದೊಂದಿಗೆ ಸದುಪಯೋಗ ಪಡಿಸಿಕೊಂಡರೆ ಮಾತ್ರ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು.
ಸಿಪಿಐ ಎಸ್. ಶ್ರೀಧರ ಮಾತನಾಡಿ, ನಮ್ಮ ದೌರ್ಬಲ್ಯಗಳನ್ನು ಅರಿತುಕೊಂಡು ಅಪರಾಧ ಚಟುವಟಿಕೆಗೆ ಬಳಸಿಕೊಳ್ಳುವ ಸಂದರ್ಭಗಳೇ ಹೆಚ್ಚುತ್ತಿವೆ. ನಾವು ಜಾಗೃತವಾಗಿದ್ದರೆ ಅಪರಾಧಗಳನ್ನು ತಡೆಗಟ್ಟಲು ಸಾಧ್ಯ. ಸಾಮಾಜಿಕ ಜಾಲತಾಣಗಳು ಹಲವು ಸಂದರ್ಭದಲ್ಲಿ ನಮ್ಮನ್ನು ಮುಜುಗರಕ್ಕೆ ಒಡ್ಡುತ್ತವೆ. ಯಾವುದನ್ನೂ ಪರಿಶೀಲಿಸದೇ ನಂಬಬಾರದು. ಅಪರಾಧ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು. ಪ್ರಾಚಾರ್ಯ ಮಾರುತಿ ಶಿಡ್ಲಾಪುರ ಅಧ್ಯಕ್ಷತೆ ವಹಿಸಿದ್ದರು.
ತಹಸೀಲ್ದಾರ್ ರವಿ ಕೊರವರ, ರೋಶನಿ ಸಮಾಜಸೇವಾ ಸಂಸ್ಥೆ ನಿರ್ದೆಶಕಿ ಅನಿತಾ ಡಿಸೋಜಾ, ಟಿಎಚ್‌ಒ ಡಾ. ಕೆ.ಜಿ. ಲಿಂಗರಾಜ್, ಪಶು ವೈದ್ಯಾಧಿಕಾರಿ ಡಾ. ಗಿರೀಶ ರೆಡ್ಡೇರ, ಪುರಸಭೆ ಸದಸ್ಯರಾದ ವೀಣಾ ಗುಡಿ, ಮಮತಾ ಆರೆಗೊಪ್ಪ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸಂತೋಷ ಸುಣಗಾರ, ಸದಸ್ಯರಾದ ರಾಜಕುಮಾರ ಶಿರಪಂತಿ, ಶಿವಶಂಕರ ಹರಿಜನ, ಡಾ. ಶಿವಕುಮಾರ ಶಿವೂರ, ಸಿಡಿಪಿಒ ಸಿ. ರಂಗನಾಥ, ಉಪನ್ಯಾಸಕ ಶಂಕರ ಪೂಜಾರ, ಎಸ್.ಎಸ್. ನಿಸ್ಸೀಮಗೌಡರ, ಎನ್‌ಎಸ್‌ಎಸ್ ಅಧಿಕಾರಿ ಕೆ. ಈಶ್ವರ, ಉಪನ್ಯಾಸಕಿ ಎಸ್.ವಿ. ರಶ್ಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net