ವಿದ್ಯುತ್ ಪ್ರವಹಿಸಿ ಹೆಸ್ಕಾಂ ನೌಕರ ಸಾವು

27-HNL-1 POWER MAN DEATH
Published on

ಹಾನಗಲ್ಲ: ವಿದ್ಯುತ್ ಕಂಬದಲ್ಲಿ ದುರಸ್ತಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿದ್ದರಿಂದ ಹೆಸ್ಕಾಂನ ಕಿರಿಯ ಪವರ್ ಮ್ಯಾನ್ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಬೆಳಗಾಲಪೇಟೆ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ. ಮಾರುತಿ ಅರ್ಜುನಪ್ಪ ಪೂಜಾರಿ (24) ಮೃತ ನೌಕರ. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದ ಮಾರುತಿ ಒಂದೂವರೆ ವರ್ಷದ ಹಿಂದೆ ಹೆಸ್ಕಾಂನಲ್ಲಿ ಕಿರಿಯ ಪವರ್ ಮ್ಯಾನ್ ಹುದ್ದೆಗೆ ನೇಮಕಗೊಂಡಿದ್ದ. ಈ ಕುರಿತು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net