ಯುಗಾದಿಯಂದು ಹಾನಗಲ್ಲ ಗ್ರಾಮದೇವಿ ಮರುಪ್ರತಿಷ್ಠಾಪನೆ

28-hnl-1 jatrte press
Published on

ಹಾನಗಲ್ಲ: ಹಾನಗಲ್ಲ ಗ್ರಾಮದೇವಿ ಜಾತ್ರೆ ಶ್ರದ್ಧಾ-ಭಕ್ತಿಯಿಂದ ಜರುಗಿದ್ದು, ಲಕ್ಷಾಂತರ ಭಕ್ತರು ದರ್ಶನ ಪಡೆದರು. ಯುಗಾದಿಯಂದು ಹಾನಗಲ್ಲ ಗ್ರಾಮದೇವಿ ಮರು ಪ್ರತಿಷ್ಠಾಪನೆ ಅಂಗವಾಗಿ ವಿವಿಧ ಹೋಮ, ಹವನ, ಉಡಿ ತುಂಬುವ ಕಾರ್ಯಕ್ರಮ ನಡೆಯಲಿವೆ ಎಂದು ಜಾತ್ರಾ ಸಮಿತಿ ಅಧ್ಯಕ್ಷ ಮಂಜುನಾಥ ನಾಗಜ್ಜನವರ ತಿಳಿಸಿದರು.

ಪಟ್ಟಣದ ಗ್ರಾಮದೇವಿ ಜಾತ್ರಾ ಸಮಿತಿ ಕಾರ್ಯಾಲಯದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಶಾಂತಿಯುತವಾಗಿ ಹಬ್ಬ ಸಂಭ್ರಮಿಸಿದ್ದು, ಸೌಹಾರ್ದಯುತ ಆಚರಣೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸಂಪ್ರದಾಯದಂತೆ ಮಾ. 30ರಂದು ಗ್ರಾಮದೇವಿಯ ಮರು ಪ್ರತಿಷ್ಠಾಪನೆ ಕಾರ್ಯ ಗ್ರಾಮದೇವಿ ದೇವಸ್ಥಾನದಲ್ಲಿ ನಡೆಯಲಿದೆ. ಮರು ಪ್ರತಿಷ್ಠಾನೆ ಅಂಗವಾಗಿ ಬೆಳಗ್ಗೆ ಹೋಮ ಹವನ, ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ ಎಂದರು.

ಜಾತ್ರಾ ಸಮಿತಿ ಕೋಶಾಧ್ಯಕ್ಷ ರಾಜು ಗೌಳಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿಯೇ ಅತ್ಯಂತ ಅರ್ಥಪೂರ್ಣ ಹಬ್ಬವಾಗಿ ಹಾನಗಲ್ಲ ಗ್ರಾಮದೇವಿ ಜಾತ್ರೆ ನಡೆದಿದೆ. ಸಾವಿರ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಪುರಸಭೆ ಪೌರ ಕಾರ್ವಿುಕರು, ವಿವಿಧ ಇಲಾಖೆಗಳ ಅಧಿಕಾರಿಗಳು ಶ್ರಮ ಶ್ಲಾಘನೀಯ. ಜಾತ್ರೆಯ ಖರ್ಚು-ವೆಚ್ಚಗಳ ಮಾಹಿತಿಯನ್ನು ಯುಗಾದಿ ನಂತರ ಭಕ್ತರೆದುರು ಮಂಡಿಸಲಾಗುವುದು. ದೇವಿಯ ಆಭರಣ ಮತ್ತು ಜಾತ್ರೆಯಲ್ಲಿ ಬಂದಿರುವ ಲಕ್ಷಾಂತರ ರೂ. ಕಾಣಿಕೆ ಹಣವನ್ನು ಸ್ಥಳೀಯ ಬ್ಯಾಂಕ್ ಶಾಖೆಯ ಟ್ರಸ್ಟ್ ಖಾತೆಯಲ್ಲಿ ಇರಿಸಲಾಗಿದೆ ಎಂದರು.

ಉಪಾಧ್ಯಕ್ಷ ಸುರೇಶ ಪೂಜಾರ, ಕಾರ್ಯದರ್ಶಿ ಗಣೇಶ ಮೂಡ್ಲಿಯವರ, ಕೋಶಾಧ್ಯಕ್ಷ ರಾಜು ಗೌಳಿ, ಸದಸ್ಯರಾದ ಭೋಜರಾಜ ಕರೂದಿ, ನಾಗೇಂದ್ರ ಬಂಕಾಪುರ, ಯಲ್ಲಪ್ಪ ಶೇರಖಾನೆ, ಬಾಳಾರಾಮ ಗುರ್ಲಹೊಸೂರ, ವಿರೂಪಾಕ್ಷಪ್ಪ ಕಡಬಗೇರಿ, ಗುರುರಾಜ ನಿಂಗೋಜಿ, ರವಿಚಂದ್ರ ಪುರೋಹಿತ, ರಾಮು ಯಳ್ಳೂರ, ನಾರಾಯಣ ಅಥಣಿ, ಸಂಜಯ ಬೇದ್ರೆ, ಆದರ್ಶ ಶೆಟ್ಟಿ, ಕೃಷ್ಣ್ಣಾ ಬಾಗಲೆ, ಮನೋಜ ಕಲಾಲ, ಈಶ್ವರ ವಾಲ್ಮೀಕಿ, ಸುನಿಲಕುಮಾರ ಅರ್ಕಸಾಲಿ, ಕೀರ್ತಿ ಚಿನ್ನಮುಳಗುಂದ, ಮಾಲತೇಶ ಕೊಲ್ಲಾಪುರ, ಗುರು ಗೊಲ್ಲರ, ಪ್ರವೀಣ ಚಿಕ್ಕಣ್ಣನವರ, ಅಜಯ ರೂಗಿಶೆಟ್ಟರ, ಮಂಜು ಬಸವಂತಕರ, ಲೋಕೇಶ ಕೊಂಡೋಜಿ, ಗುರು ಏಸಕ್ಕನವರ, ಚನ್ನು ಹುಗ್ಗಿ, ಮಹೇಶ ಮೂಡ್ಲಿಯವರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net