ಶಾಲೆಗಳು ದೇವಾಲಯ ಮಕ್ಕಳೇ ದೇವರು

27-hnl-1 mane
Published on

ಹಾನಗಲ್ಲ: ಶಾಲೆಗಳು ದೇವಾಲಯಗಳಿದ್ದಂತೆ, ಮಕ್ಕಳು ದೇವರಿಗೆ ಸಮಾನ. ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಿದರೆ ದೇವರ ಸೇವೆ ಮಾಡಿದಂತೆ ಎನ್ನುವ ಭಾವನೆ ನಮ್ಮದಾಗಬೇಕು ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ತಾಲೂಕಿನ ಬೈಚವಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಗುರುವಾರ ಮೊಟ್ಟೆ ವಿತರಣೆಗೆ ಚಾಲನೆ ನೀಡಿ, ವಿವೇಕ ಯೋಜನೆಯಡಿ 42 ಲಕ್ಷ ರೂ. ವೆಚ್ಚದಲ್ಲಿ ನಿರ್ವಿುಸಿದ 3 ಕೊಠಡಿ ಹಾಗೂ ನೂತನ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿ ಅವರು ಮಾತನಾಡಿದರು.

ಸಹೃದಯಿ ಉದ್ಯಮಿ ಅಜೀಂ ಪ್ರೇಮ್ ಅವರು ವಿದ್ಯಾರ್ಥಿಗಳಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು 1,591 ಕೋಟಿ ರೂ. ವಿನಿಯೋಗಿಸಿ 6 ದಿನ ಮೊಟ್ಟೆ ವಿತರಿಸುವ ಕಾರ್ಯಕ್ರಮಕ್ಕೆ ಸರ್ಕಾರದೊಂದಿಗೆ ಕೈಜೋಡಿಸಿದ್ದಾರೆ. ರಾಜ್ಯದಲ್ಲಿ 56 ಲಕ್ಷ ವಿದ್ಯಾರ್ಥಿಗಳು ಈ ಕಾರ್ಯಕ್ರಮದಡಿ ಅನುಕೂಲ ಪಡೆಯಲಿದ್ದಾರೆ ಎಂದರು.

ಬಿಇಒ ವಿ.ವಿ. ಸಾಲಿಮಠ ಮಾತನಾಡಿ, ತಾಲೂಕಿನಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಗೆ ನಂ-1 ಸ್ಥಾನದ ಗುರಿ ಹೊಂದಿ ಕಾರ್ಯೋನ್ಮುಖರಾಗಿದ್ದೇವೆ. ತಾಲೂಕಿನಲ್ಲಿ ಶಿಕ್ಷಕರ ಕೊರತೆ ನೀಗಿಸಲಾಗಿದೆ. ಗುಣಮಟ್ಟದ ಶಿಕ್ಷಣ ದೊರಕಿಸುವಲ್ಲಿ ಗಮನ ನೀಡಲಾಗಿದೆ. ಶಿಕ್ಷಕರ ಕೌಶಲ ವೃದ್ಧಿಪಡಿಸಲಾಗುತ್ತಿದೆ ಎಂದರು.

ಎಸ್​ಡಿಎಂಸಿ ಅಧ್ಯಕ್ಷ ಶಂಕ್ರಣ್ಣ ತಾವರಗೆರೆ, ಗ್ರಾಪಂ ಅಧ್ಯಕ್ಷೆ ಕವನಾ ಕಲ್ಲನಗೌಡ್ರ, ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಶಿವಯ್ಯ ಹಿರೇಮಠ, ಉಮೇಶ ದಾನಪ್ಪನವರ, ಮರಿಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಶ್ರೀಕಾಂತ ಅರಳೇಶ್ವರ, ಪಿಡಿಒ ಸುಮಂಗಲಾ, ಮುಖ್ಯಶಿಕ್ಷಕಿ ಹೇಮಾ, ಮೌಲಾಸಾಬ್ ಯಳವಟ್ಟಿ, ಸೋಮು ರ್ನೆ, ಭರಮಗೌಡ ಪಾಟೀಲ, ತಿಮ್ಮಣ್ಣ ಅಲಿಲವಾಡ, ಗಂಗಾಧರ ಹಿರೇಮಠ, ಶಶಿಧರ ಕೋಟಿ, ಸೋಮಣ್ಣ ಕೊಡ್ರನವರ, ಬಿ.ಎಸ್. ಸಣ್ಣಭಂಗಿ, ಮಹೇಶ ನಾಯ್ಕ, ಮಲ್ಲಣ್ಣ ಸಾವಿಕೇರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net