ವಿದ್ಯುತ್ ಪೂರೈಕೆ ವ್ಯತ್ಯಯ ಶನಿವಾರ

14- current no
Published on

ಹಾನಗಲ್ಲ: ತಾಲೂಕಿನ ತಿಳವಳ್ಳಿ ಗ್ರಾಮದ 110/33, 11 ಕೆವಿ ವಿದ್ಯುತ್ ವಿತರಣೆ ಕೇಂದ್ರದಲ್ಲಿ ನಿರ್ವಹಣೆ ಕಾರ್ಯ ನಿಮಿತ್ತ ಸೆ. 16ರಂದು ಬೆಳಗ್ಗೆ 10 ರಿಂದ ಸಂಜೆ 6ರವರೆಗೆ ತಿಳವಳ್ಳಿ 110/33 11 ಕೆವಿ ವಿದ್ಯುತ್ ವಿತರಣೆ ಕೇಂದ್ರದಿಂದ ಪೂರೈಕೆಯಾಗುವ ತಿಳವಳ್ಳಿ ಐಪಿ, ಕಿರವಾಡಿ ಎನ್‌ಜೆವೈ, ಕಿರವಾಡಿ ಐಪಿ, ಜಾಲಿ ಐಪಿ, ಕೆರೆಕ್ಯಾತನಹಳ್ಳಿ, ಕೂಸನೂರು, ಕೂಸನೂರು ಎನ್‌ಜೆವೈ, ಹಿರೇಬಾಸೂರ, ಗಾಳಪೂಜಿ, ಗಾಳಪೂಜಿ ಎನ್‌ಜೆವೈ, 11 ಕೆವಿ ಮಾರ್ಗಗಳಿಂದ ಪೂರೈಕೆಯಾಗುವ ಎಲ್ಲ ಗ್ರಾಮಗಳಿಗೆ ಹಾಗೂ ಶೇಷಗಿರಿ, ಬ್ಯಾತನಾಳ ಏತ ನೀರಾವರಿ, ಮತ್ತು ಕಲಕೇರಿ ವಿದ್ಯುತ್ ವಿತರಣಾ ಕೇಂದ್ರಗಳಿಂದ ಹೊರಡುವ 11 ಕೆವಿ ಮಾರ್ಗಗಳಾದ ಬಸಾಪುರ, ತಾವರಗೊಪ್ಪ, ಉಪ್ಪುಣಸಿ, ಸೋಮಸಾಗರ, ಕನ್ನೇಶ್ವರ, ಕಲಕೇರಿ, ಮಾರ್ಗಗಳ ಎಲ್ಲ ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸಬೇಕು ಎಂದು ಹೆಸ್ಕಾಂ ಎಇಇ ಆನಂದ್ ಸುವರ್ಣಕರ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net