ಬೆಳೆ ವಿಮೆ ಬಿಡುಗಡೆಗೆ ಕೃಷಿ ಸಚಿವರಿಗೆ ಪತ್ರ

4-hnl mane-cheluva
Published on

ಹಾನಗಲ್ಲ: 2022-23ನೇ ಸಾಲಿನ ಹಿಂಗಾರು, ಬೇಸಿಗೆ ಬೆಳೆ ವಿಮೆಯನ್ನು ಜಿಲ್ಲಾವಾರು ಸಮೀಕ್ಷೆ ಪ್ರಕಾರ ಮಂಜೂರಿ ಮಾಡಿ ಪರಿಹಾರ ಹಣ ಬಿಡುಗಡೆಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶಿಸುವಂತೆ ಶಾಸಕ ಶ್ರೀನಿವಾಸ ಮಾನೆ ಅವರು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ತಾಲೂಕಿನಲ್ಲಿ ರೈತ ಸಮೂಹ 2022-23ನೇ ಸಾಲಿನ ಹಿಂಗಾರು/ಬೇಸಿಗೆ ಬೆಳೆ ವಿಮೆ ಕಂತು ಭರಿಸಿದ್ದು, ಬೆಳೆ ಕಟಾವು ವರದಿ ಸಹ ದಾಖಲಿಸಿದ್ದಾರೆ. ಆದರೆ, ಎಐಸಿ ಕಂಪನಿ ಅಧಿಕಾರಿಗಳು ಆಕ್ಷೇಪಣೆ ಸಲ್ಲಿಸಿದ್ದಾರೆ. ಆಕ್ಷೇಪಣೆ ಆಧಾರರಹಿತವಾಗಿದೆ ಎಂದು ಜಿಲ್ಲಾಧಿಕಾರಿಗಳು ಅಲ್ಲಗಳೆದು ಬೆಳೆ ವಿಮೆ ಪರಿಹಾರ ಬಿಡುಗಡೆ ಮಾಡುವಂತೆ ಕೃಷಿ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಕೂಡಲೇ ರೈತರಿಗೆ ಬೆಳೆ ವಿಮೆ ಪರಿಹಾರ ಹಣ ಮಂಜೂರಿ ಮಾಡುವಂತೆ ಶ್ರೀನಿವಾಸ ಮಾನೆ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net