ಗಾಂವಠಾಣ ಜಮೀನು ಸರ್ವೆ ನಡೆಸಿ

24-hnl-mane
Published on

ಹಾನಗಲ್ಲ: ಸ್ಥಳೀಯ ಪುರಸಭೆ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ಹಂಚಿಕೆ ಮಾಡಲು ಲಭ್ಯವಿರುವ ಗಾಂವಠಾಣ ಜಮೀನು ಗುರುತಿಸಿ, ಸರ್ವೆ ಕಾರ್ಯ ನಡೆಸಲು ಪುರಸಭೆಯಲ್ಲಿ ಶಾಸಕ ಶ್ರೀನಿವಾಸ ಮಾನೆ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಆಶ್ರಯ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ತಾಲೂಕಿನ ಕಾಮನಹಳ್ಳಿ ಮತ್ತು ಬೈಚವಳ್ಳಿ ರಸ್ತೆ ಹಾಗೂ ತಾಲೂಕು ಕ್ರೀಡಾಂಗಣದ ಪಕ್ಕದಲ್ಲಿ ಲಭ್ಯವಿರುವ ಜಮೀನಿನ ಸರ್ವೆ ನಡೆಸಬೇಕು. ಕೆಎಚ್​ಬಿ ಅಥವಾ ಯಾವುದಾದರೂ ಇಲಾಖೆಗೆ ವಸತಿ ಯೋಜನೆಗಾಗಿ ವಿನ್ಯಾಸ ತಯಾರಿಸಲು ಪ್ರಸ್ತಾವನೆ ಸಲ್ಲಿಸಬೇಕು. ಮುಂದಿನ ಸಭೆಯೊಳಗೆ ಸರ್ವೆ ನಡೆಸಿ ಅಗತ್ಯ ಮಾಹಿತಿ ಸಿದ್ಧಪಡಿಸಬೇಕು ಎಂದು ಶಾಸಕರು ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಎನ್.ಎಸ್. ನಾಗನೂರ ಅವರಿಗೆ ಸೂಚಿಸಿದರು. ನಿವೇಶನ ರಹಿತ 7 ಪೌರಕಾರ್ವಿುಕರಿಗೆ ನವನಗರದ ರಿ.ಸ.ನಂ. 283/1 ಹಾಗೂ 283/3ರಲ್ಲಿ ನಿವೇಶನ ಗುರುತಿಸಿ ಹಂಚಿಕೆ ಮಾಡಲು ತೀರ್ವನಿಸಲಾಯಿತು. ವಿವಿಧ ವಸತಿ ಯೋಜನೆಗಳ ಪ್ರಗತಿಯನ್ನು ಶಾಸಕರು ಪರಿಶೀಲಿಸಿದರು. ತಹಸೀಲ್ದಾರ್ ಎಸ್. ರೇಣುಕಾ, ಪುರಸಭೆ ಅಧ್ಯಕ್ಷೆ ಮಮತಾ ಆರೆಗೊಪ್ಪ, ಆಶ್ರಯ ಸಮಿತಿ ಸದಸ್ಯರಾದ ಮೇಘನಾ ಸುಲಾಖೆ, ನಿಯಾಜ್ ಸರ್ವಿಕೇರಿ, ವಿನಾಯಕ ಬಂಕನಾಳ, ಮಾಲತೇಶ ಕಾಳೇರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net